September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ವಾರ್ಷಿಕ ಮಹಾಸಭೆ

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘ, ಇದರ 2024-25 ನೇ ವರ್ಷದ ವಾರ್ಷಿಕ ಮಹಾಸಭೆಯು ಸೆ. 04 ರಂದು ಬ್ಯಾಂಕಿನ ಸಭಾಂಗಣದಲ್ಲಿ ಜರಗಿತು.

ಮಹಾಸಭೆಯ ಸಭಾ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್ ರವರು ವಹಿಸಿ ಮಾತನಾಡಿ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 408 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ. 9252494.31 ಲಾಭ ಗಳಿಸಿದೆ. ಸದಸ್ಯರಿಗೆ ಶೇ. 12 ಡಿವಿಡೆಂಡ್ ವಿತರಣೆ ಮಾಡಲಾಗಿದೆ ಎಂದರು.

ಸಂಘವು ಆಡಿಟ್ ವರ್ಗೀಕರಣದಲ್ಲಿ ಎ ವರ್ಗ ಹೊಂದಿದ್ದು,ಪ್ರಾರಂಭದಲ್ಲಿ ನಿಧನ ಹೊಂದಿದ  ಸಂಘದ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು . 

ಈ ಸಂದರ್ಭದಲ್ಲಿ ನಿರ್ದೇಶಕರಾದ ಅರುಣ ಕುಮಾರ್, ಗುರುರಾಜ್ ಅಂತರ, ಅರವಿಂದ ಕಾರಂತ ಕೆ. , ಅನಿಲ್ ಪ್ರಕಾಶ್ ಡಿ’ಸೋಜಾ, ಬಾಲಕೃಷ್ಣ ಗೌಡ ಶ್ರೀಮತಿ ಪುಷ್ಪಾವತಿ ಆರ್ ಶೆಟ್ಟಿ, ಶ್ರೀಮತಿ ವಾರಿಜ ಎಸ್ ಗೌಡ. ಅಣ್ಣು ನಾಯ್ಕ , ಸಾದು ಎಂ, ಮತ್ತು ಸಂಘದ , ಸುದರ್ಶನ್ ವಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸದಾಶಿವ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸರಸ್ವತಿ ಸಿ ರೈ ವರದಿ ಮಂಡಿಸಿದರು. ಸಿಬ್ಬಂದಿ ಮೋಹನ ಗೌಡ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ರಜತ ಗೌಡ ವಂದಿಸಿದರು.

Related posts

ಬೆಳ್ತಂಗಡಿ 47ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಉದ್ಘಾಟನೆ

Suddi Udaya

ಬೆಳ್ತಂಗಡಿ: ಹೆದ್ದಾರಿಯ ಅಗಲೀಕರಣ ಪರಿಹಾರಧನ ಪಡೆದಮನೆ, ಕಟ್ಟಡಗಳ ತೆರಿಗೆ ರದ್ದು ಪಡಿಸಲು ಸೂಚನೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿಶ್ರುತಿ 2k26’ ಕಾರ್ಯಕ್ರಮ

Suddi Udaya

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ಪುದುವೆಟ್ಟು ವಿ. ಹಿಂ. ಪ. ಭಜರಂಗದಳ ವತಿಯಿಂದ ಶ್ರೀ ವನದುರ್ಗ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಗುಂಡೂರಿ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ಜಾತ್ರಾ ಮಹೋತ್ಸವ, ಆಮಂತ್ರಣ ದಶಮಾನೋತ್ಸವ ಸಂಭ್ರಮ: ಉದ್ಯಮಿ ಮೋಹನ್ ಕುಮಾರ್‌ರವರಿಂದ ಅಮ್ಯೂಸ್‌ಮೆಂಟ್ ಉದ್ಘಾಟನೆ

Suddi Udaya
error: Content is protected !!