ಉಜಿರೆ: ಸೆ.5ರಂದು ಉಜಿರೆಯ ಪ್ರಗತಿ ಮಹಿಳಾ ಮಂಡಲದ ಕಟ್ಟಡದ ಸಭಾಂಗಣದಲ್ಲಿ ಸುನಾದ ಸಂಗೀತ ಕಲಾಶಾಲೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯೋಲಿನ್ ತರಗತಿಯನ್ನು ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪ್ರಕಾಶ್ ರವರು ದೀಪ ಪ್ರಜ್ವಲನ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶ್ರೀಧರ್, ಶಿಕ್ಷಕ ಕೃಷ್ಣಕುಮಾರ್, ಸುಬ್ರಹ್ಮಣ್ಯ ಪ್ರಸಾದ್ ಕಾಂಚನ ಉಪಸ್ಥಿತರಿದ್ದರು.

ಸಂಗೀತ ಗುರುಗಳಾದ ಶ್ರೀರಾಮ ಕಾಂಚನ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಉದ್ಘಾಟನೆಯ ನಂತರ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ ಮತ್ತು ವಯೋಲಿನ್ ತರಗತಿಗಳು ನಡೆಯಿತು.











