22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಈದ್ ಮಿಲಾದ್ ಪ್ರಯುಕ್ತ ಖಿಲರ್ ಜುಮ್ಮಾ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ

ಬೆಳ್ತಂಗಡಿ : ಖಿಲರ್ ಜುಮ್ಮಾ ಮಸೀದಿ ಮತ್ತು ಖಿಲರಿಯಾ ಸ್ವಲಾತ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ 3 ದಿನಗಳ ಧಾರ್ಮಿಕ ಕಾರ್ಯಕ್ರಮ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಜಮಾತ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸೆ. 3 ರಾತ್ರಿ ನಡೆದ ಮದರಸ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ತ್ವಾಹ ಜಿಫ್ರಿ ತಂಗಳ್ ಅವರ ದುವಾಶೀರ್ವಾದದೊಂದಿಗೆ ಮಸೀದಿ ಖತೀಬಾರದ ಹನೀಫ್ ಫೈಝಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮದರಸ ಪ್ರಾಧ್ಯಾಪಕರು, ಜಮಾತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೆ.4 ರಾತ್ರಿ ಸಮಾರೋಪ ಸಮಾರಂಭ ಕಾರ್ಯಕ್ರಮ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600 ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಮದರಸ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಅತಿಥಿಯಾಗಿ ಆಗಮಿಸಿದ್ದ ಡ್ರಿಮ್ ಡೀಲ್ ಮಾಲೀಕರಾದ ಜ| ಮಹಮ್ಮದ್ ಸುಹೈಲ್ ಅವರನ್ನು ಸನ್ಮಾನಿಸಲಾಯಿತು.

ಖಿಲರ್ ಜುಮ್ಮಾ ಮಸೀದಿ ಸೇವೆ ನೀಡುತ್ತಿರುವ ಉಸ್ತಾದರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸೆ. 5 ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಸ್ವಲಾತ್ ಕಮಿಟಿ ಅಧ್ಯಕ್ಷ ಹೈದರ್ ಬಿ.ಕೆ ನೆರವೇರಿಸಿದರು. ಗುರುವಾಯನಕೆರೆ ದರ್ಗಾ ಝೀಯಾರತ್ ನಂತರ ಮಸೀದಿಯಲ್ಲಿ ಮೌಲಿದ್ ಪಾರಾಯಣ ನಡೆಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿ ಇದರ ಪದಾಧಿಕಾರಿಗಳು, ಖಿಲರಿಯಾ ಸ್ವಲಾತ್ ಕಮಿಟಿ ಪದಾಧಿಕಾರಿಗಳು, ಮಸೀದಿ ಉಸ್ತಾದರು, ಜಮಾತ್ ಬಾಂಧವರು, ಮಕ್ಕಳು, ಪೋಷಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ನಝೀರ್ ಬಿ ಎ, ಮಹಮ್ಮದ್ ಕೊಡಿ ಸಭೆ, ಬಿ. ಶೇಕುಂಞ್ಞ, ಶರೀಫ್ ಮಟ್ಲ, ರಝಕ್ ಕೊಡಿಸಭೆ, ಹೈದರ್ ಬಿ.ಕೆ, ಫೈಝಲ್ ಐ ಜೆ, ಇಸ್ಮಾಲಿ ಐ ಬಿ, ಹಾರಿಸ್ ಐ ಜೆ, ಅಬುಸಾಲಿ, ಎನ್ ಎಸ್ ಅಬ್ದುಲ್ ರಹಿಮಾನ್, ಖಾದರ್ ಕುದ್ರಡ್ಕ, ಮೊಯಿದಿನ್ ಬಿ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

ಸುಲ್ಕೇರಿಮೊಗ್ರು ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಇಂದುಗ್ರಾಂ.ಪಂ. ಆಡಳಿತ ಮಂಡಳಿ ಭೇಟಿ

Suddi Udaya

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಪ್ರಯುಕ್ತ ಭಜನ್ ಸಂಧ್ಯಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ ಯೋಗ ರತ್ನ ಪ್ರಶಸ್ತಿಗೆ ಖುಷಿ. ಹೆಚ್, ಮೈಸೂರು ಆಯ್ಕೆ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯ ಸ್ಕೌಟ್ ವಿದ್ಯಾರ್ಥಿಗೆ ರಾಜ್ಯಮಟ್ಟದ ಪ್ರಶಸ್ತಿ ಪತ್ರ

Suddi Udaya

ಓಡಿಲ್ನಾಳ: ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ; ಕಳಿಯ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ವಸಂತ ಮಜಲು ಭೇಟಿ ನೀಡಿ ತುರ್ತು ಪರಿಹಾರ

Suddi Udaya

ಕಳೆಂಜ ಗ್ರಾಮದ ಪುಜೇರಿಪಾಲ್ ಮೋನಪ್ಪ ಗೌಡರ ತೋಟಕ್ಕೆ ಕಾಡಾನೆ ದಾಳಿ

Suddi Udaya
error: Content is protected !!