September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಿಚಾರಣೆ ಮುಗಿಸಿ ತಡರಾತ್ರಿ ವಾಪಸ್ ಹೋದ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ

ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಸೆ.5 ರಂದು ಬೆಳಗ್ಗೆ 11:30 ಕ್ಕೆ ಬೆಳ್ತಂಗಡಿ ಕಚೇರಿಗೆ ಆಗಮಿಸಿ ಗಿರೀಶ್ ಮಟ್ಟಣ್ಣ‌ನವರ್ , ಜಯಂತ್. ಟಿ , ಯೂಟ್ಯೂಬರ್ ಅಭಿಷೇಕ್, ಸೌಜನ್ಯ ಮಾವ ವಿಠಲ ಗೌಡ ನನ್ನು ಖುದ್ದು ವಿಚಾರಣೆ ಮಾಡಿ ರಾತ್ರಿ 11 ಗಂಟೆಗೆ ವಾಪಸ್ ಮಂಗಳೂರಿಗೆ ತೆರಳಿದ್ದಾರೆ.

ಬುರುಡೆ ಚಿನ್ನಯ್ಯ ಇಂದು ಕೋರ್ಟಿಗೆ :
ಧರ್ಮಸ್ಥಳ ದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿ ಬಂದಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು ಶನಿವಾರ ಆತನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಆ23 ರಂದು ಚಿನ್ನಯ್ಯ ನನ್ನು ಎಸ್.ಐ.ಟಿ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿಸೆ.3ರ ವರೆಗೆ ವಶಕ್ಕೆ ಪಡೆದಿದ್ದರು, ಸೆ.3ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಸೆ6 ರ ವರೆಗೆ ಆತನನ್ನು ಎಸ್.ಐ.ಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿತ್ತು. ಶನಿವಾರ ಚಿನ್ನಯ್ಯನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. ಬುರುಡೆ ಪ್ರಕರರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ನ ವಿಚಾರಣೆ ಬಹುತೇಕ ಮುಗಿದಿರುವುದಾಗಿ ತಿಳಿದು ಬಂದಿದ್ದು ಎಸ್.ಐ.ಟಿ ತಂಡಈತನನ್ನು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಕಡಿಮೆಯಾಗಿದ್ದು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಚಿನ್ನಯ್ಯನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಗಳು ಹೆಚ್ಚಾಗಿದೆ

Related posts

ಧರ್ಮಸ್ಥಳ: ಮುಳಿಕ್ಕಾರುನಲ್ಲಿ ಕಾಡಾನೆಗಳ ದಾಳಿ: ಅಪಾರ ಕೃಷಿ ಹಾನಿ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲಾ ಸಂಸತ್ತು ಚುನಾವಣೆ

Suddi Udaya

ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆಗೆ ಶೀಘ್ರವೇ ಶಿಲಾನ್ಯಾಸ: ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆ ದುರಸ್ತಿಗೆ 7 ಬಾರಿ ಸರಕಾರಕ್ಕೆ ಮನವಿ: ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿ

Suddi Udaya

ನಾವರ: ರಾಜಪಾದೆ ಮನೆಯ ಕೊರಗು ಹೆಗ್ಡೆ ನಿಧನ

Suddi Udaya

ಪಟ್ಟೂರು ಕಾನೂನು ಬಾಹಿರ ಮನೆ ಜಪ್ತಿ : ತಪ್ಪಿತಸ್ತ ಅಧಿಕಾರಿ ಮೇಲೆ ಕ್ರಮಕ್ಕೆ ಮುಸ್ಲಿಂ ಒಕ್ಕೂಟ ಬೆಳ್ತಂಗಡಿ ಆಗ್ರಹ: ನೂತನ ಡಿವೈಎಸ್‌ಪಿ ಜೊತೆ ಮುಸ್ಲಿಂ ಮುಖಂಡರ ಮಾತುಕತೆ

Suddi Udaya

ಅಂಡಿಂಜೆ ಸ.ಉ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya
error: Content is protected !!