23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಾಂಡವರಕಲ್ಲು : ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಪಾಂಡವರಕಲ್ಲು: ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಒಕ್ಕೂಟಗಳ ( ಬಡಗಕಜೆಕಾರು -ಮಾಡಪಲಿಕೆ -ತೆಂಕಕಜೆಕಾರು ) ಸಹಯೋಗದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನೆರವೇರಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕರಾಗಿ ಮಾತನಾಡಿದ ಸುರತ್ಕಲ್ ಶ್ರೀ ಗೋವಿಂದ ದಾಸ ಕಾಲೇಜ್ ಉಪನ್ಯಾಸಕಿ ಅಕ್ಷತಾ ರವರು ಹಿಂದೂ ಧರ್ಮದ ಬಗ್ಗೆ ತುಳುನಾಡಿನ ಸಂಸ್ಕೃತಿ ಬಗ್ಗೆ ಧರ್ಮವನ್ನು ಮಾನವ ಜೀವನದಲ್ಲಿ ಅಳವಡಿಸುವ ಬಗ್ಗೆ ಹಾಗೆನೇ ಒಂದು ಕುಟುಂಬ ಧಾರ್ಮಿಕ ನೆಲೆಯಲ್ಲಿ ಯಾವ ರೀತಿ ಬದುಕಬೇಕು ಧರ್ಮದ ನೆಲೆಗಟ್ಟು ದೈವ ದೇವರ ಅನುಸರಣೆ ಹಾಗೂ ಉಪಾಸನ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂಬ ವಿಚಾರದ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದರು.

ಜಯಾನಂದ ಪಿ ಇವರು ಕಜೆಕಾರು ಭಕ್ತರ ಧರ್ಮ ಜಾಗೃತಿ ಹಾಗೂ ಕ್ಷೇತ್ರದ ಪರಂಪರೆಯ ಬಗ್ಗೆ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಸದಾ ಬೆನ್ನೆಲುಬಾಗಿ ನಿಲ್ಲುತೆ ಎಂಬ ಮಾತಿನೊಂದಿಗೆ ಮುಂಬರುವ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟಕ್ಕೆ ಶ್ರೀ ಕ್ಷೇತ್ರದ ಅಭಿನಂದನೆಗೆ ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದ ಭಜನಾ ಮಂಡಳಿ ಆಯ್ಕೆಯಾದದ್ದನ್ನು ಪ್ರಕಟಿಸಿ ಅಭಿನಂದಿಸಿದರು.

ವೇದಿಕೆಯಲ್ಲಿ ಕಜೆಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಬಂಗೇರ, ಉಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಸಂತ ಸಾಲಿಯನ್ ರಾಮನಗರ ಉಪಸ್ಥಿತರಿದ್ದರು. ಒಕ್ಕೂಟದ ಪದಾಧಿಕಾರಿಗಳು, ಸಿ ಎ ಬ್ಯಾಂಕಿನ ನಿರ್ದೇಶಕರು, ಪಂಚಾಯಿತಿ ಸದಸ್ಯರು, ಊರ ಗಣ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕ್ಷೇತ್ರದ ಜೀರ್ಣೋದರ ಸಮಿತಿಯ ಅಧ್ಯಕ್ಷ ಗುಣಶೇಖರ ಕೊಡಂಗೆ ಪ್ರಸ್ತಾಪಿಸಿ ಸ್ವಾಗತಿಸಿದರು, ಸೇವಾನಿರತೆ ಸುಧಾ ರೈ ವಂದಿಸಿದರು, ಗ್ರಾಮ ಪಂಚಾಯತ್ ಅಧ್ಯಕ್ಷ ದೇವದಾಸ್ ಅಬುರ ಕಾರ್ಯಕ್ರಮ ನಿರೂಪಿಸಿದರು.

Related posts

ಕನ್ಯಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ನಡ: ಸ್ಟಾರ್ ಲೈನ್ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾವಂತ ‘ಯತೀಂ’ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಭೆ

Suddi Udaya

ಲಾಯಿಲ ಅರಣ್ಯ ಪ್ರದೇಶದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ

Suddi Udaya

ಬಳ್ಳಮಂಜ ಬಸದಿಯಲ್ಲಿ 37ನೇ ವರ್ಷದ ವಾರ್ಷಿಕೋತ್ಸವ: ಧಾರ್ಮಿಕ ಸಭೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ದಿ| ನಂದಕುಮಾರ್ ಉಜಿರೆ ರವರಿಗೆ ಶ್ರದ್ಧಾಂಜಲಿ

Suddi Udaya
error: Content is protected !!