March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುತ್ತಿಲ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ತಣ್ಣೀರುಪಂತ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕು ತಣ್ಣೀರುಪಂತ ವಲಯ ದ.ಕ.ಜಿ.ಪ ಸರಕಾರಿ ಪ್ರೌಢಶಾಲೆ ಪುತ್ತಿಲದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ ಪುತ್ತಿಲರವರು ನೆರವೇರಿಸಿ, ಮಕ್ಕಳಿಗೆ ಶುಭಹಾರೈಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ.ಸೋಮಶೇಖರ್ ಶೆಟ್ಟಿಯವರು ದುಶ್ಚಟದಿಂದ ಮಕ್ಕಳು ದೂರ ಇರಬೇಕು. ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಬೆಳೆಯಬೇಕು ಮದ್ಯಪಾನ, ಸಿಗರೇಟ್, ಗಾಂಜಾ, ಆಫೀಮ್ ಇವುಗಳಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮೂಡಿ ಬರಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷ ರಾಜಶೇಖರ ರೈ, ಶಾಲೆಯ ಮುಖ್ಯೋಪಾಧ್ಯಾಯರಾದ ಮಹೇಂದ್ರ ಪೂಜಾರಿ, ಪುತ್ತಿಲ ಒಕ್ಕೂಟದ ಕಾರ್ಯದರ್ಶಿಯಾದ ಸುಖಲತಾ, ಸೇವಾಪ್ರತಿನಿಧಿಯಾದ ಸುನೀತಾ ಹಾಗೂ ಶಾಲೆಯ ಶಿಕ್ಷಕ ವೃಂದಾದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ವಲಯದ ಮೇಲ್ವಿಚಾರಕರಾದ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿ , ಸೇವಾಪ್ರತಿನಿಧಿ ಶಾಂತ ಸ್ವಾಗತಿಸಿ, ಶಿಕ್ಷಕ ಪ್ರದೀಪ್ ಧನ್ಯವಾದವಿತ್ತರು.

Related posts

ಬೆಳ್ತಂಗಡಿ: ಕಲ್ಲಗುಡ್ಡೆ ನಿವಾಸಿ ಚಂದ್ರ ನಿಧನ

Suddi Udaya

ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಗಾಂಧೀಜಿ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ : ಇಬ್ಬರು ಆಂಬುಲೆನ್ಸ್ ಚಾಲಕರು ಎಸ್.ಐ.ಟಿ ವಿಚಾರಣೆಗೆ ಹಾಜರು

Suddi Udaya

ಗುರುವಾಯನಕೆರೆ ವಿದ್ವತ್ ಪಿ.ಯು ಕಾಲೇಜಿನಲ್ಲಿ “ ಕಾರ್ಗಿಲ್ ವಿಜಯ್ ದಿವಸ್ ”ಆಚರಣೆ

Suddi Udaya

ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸ.ಸಂಘದ-ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತ ಸದಸ್ಯರಾಗಿ ಹರೀಶ್ ರಾವ್ ಕಾಯಡ ಆಯ್ಕೆ

Suddi Udaya

ಓಡೀಲು 33ನೇ ಸಾರ್ವಜನಿಕ ಗಣೇಶೋತ್ಸವ: ಗಣಪತಿ ದೇವರಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya
error: Content is protected !!