ಉಜಿರೆ ವರ್ತಕರ ಸಂಘದ ಕ್ರಿಯಾಶೀಲ ಸದಸ್ಯೆ ಲೀಲಾವತಿಯವರು ಇತ್ತೀಚೆಗೆ ಒಂದು ಅಂಗಡಿಯನ್ನು ಪ್ರಾರಂಭಿಸಿದರು ಆದರೆ ಸೆ. 7ರಂದು ಅಂಗಡಿಗೆ ಕಳ್ಳರು ನುಗ್ಗಿ ಸುಮಾರು 3000 ರೂ ಬೆಲೆಯ ವಸ್ತುಗಳನ್ನು ಕಳವುಗೈದಿರುತ್ತಾರೆ. ವಿಷಯ ತಿಳಿದ ಉಜಿರೆ ವರ್ತಕರ ಸಂಘದವರು ಅವರ ಅಂಗಡಿಗೆ ಹೋಗಿ ಅವರಿಗೆ ರೂ. 3000 ಧನ ಸಹಾಯವನ್ನು ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ರಮ್ಯ, ಕಾರ್ಯದರ್ಶಿ ಅಬುಬಕ್ಕರ್, ನಿಕಟಪೂರ್ವ ಅಧ್ಯಕ್ಷ ಅರವಿಂದ್ ಕಾರಂತ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ವರ್ತಕ ಸಂಘದ ಉಪಾಧ್ಯಕ್ಷರುಗಳಾದ ಪ್ರವೀಣ್ ಹಳ್ಳಿಮನೆ, ಜಯಂತ್ ನಮನ್ ಬೇಕರಿ, ಪ್ರಶಾಂತ್ ಅಮೃತ್ ಟೆಕ್ಸ್ ಟೈಲ್ಸ್, ಸದಸ್ಯ ವಿಜಯ್ ಶ್ರೀರಾಂ ತರಕಾರಿ ಉಪಸ್ಥಿತರಿದ್ದರು.











