ಬಜಿರೆ: ಪಿ.ಎಂ.ಶ್ರೀ ಸ.ಹಿ.ಪ್ರಾ. ಶಾಲೆ ಬಜಿರೆ ಇಲ್ಲಿಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಜರುಗಿತು.
ಎಸ್‌ಡಿಎಂಸಿ ಅಧ್ಯಕ್ಷರಾಗಿ ದಿನೇಶ್ ಪೂಜಾರಿ ಕಲ್ಪನೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ಆಯ್ಕೆಯಾದರು. ಸದಸ್ಯರುಗಳಾಗಿ ಜಯಂತಿ, ಬೂಬ, ತುಂಗಮ್ಮ, ಭರತ್‌ರಾಜ್, ಶಶಾಂಕ್ ಜೈನ್, ಜಯಂತಿ, ಶೋಭಾ, ರಜನಿ, ಶಾರದಾ, ರೇಣುಕಾ, ಪ್ರಮೀಳಾ, ಡೀಕಯ್ಯ ಗೌಡ, ಕಾಶೀನಾಥ್ ಹೆಗ್ಡೆ, ಲೋಕೇಶ್ ಕೊರ್ಲೋಡಿ, ರಮೇಶ್ ಆಚಾರಿ, ಹರೀಶ್ ಆಯ್ಕೆಯಾದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಕಮಲಾಜಿ ಎಸ್. ಜೈನ್ ಹಾಗೂ ಸಹಶಿಕ್ಷಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











