September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯಿಂದ (NDRF) ಮಾಹಿತಿ ಕಾರ್ಯಾಗಾರ

ಉಜಿರೆ: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ ಸೆ. 1 ರಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯಿಂದ ಮಾಹಿತಿ ಕಾರ್ಯಗಾರ ಪರಿಸರ ಸಂಘದ ವತಿಯಿಂದ ನಡೆಯಿತು.


ಇನೆಸ್ಪಕ್ಟರ್ ಶಾಂತಿಲಾಲ್ ಜಟ್ಟಿ NDRF ಬೆಂಗಳೂರು ಇವರು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಕೆಲಸ ನಿರ್ವಹಣೆ ಮಾಡುತ್ತದೆ ಎಂದು ತಿಳಿಸಿದರು. ಹೆಡ್ ಕಾನ್ಸ್ಟೇಬಲ್ ಶಂಕರಪ್ಪ ಇದರ ಮುಖ್ಯ ಕರ್ತವ್ಯಗಳು ,ಭೂಕಂಪ, ನೆರೆ ಸುನಾಮಿ ಚಂಡಮಾರುತ ಅಗ್ನಿ ಅವಘಡ, ಅಣು ದುರಂತ, ತುರ್ತು ವೈದ್ಯಕೀಯ ನೆರವು, ವಿಪತ್ತು ಸಂಭವಿಸಿದ ಪ್ರದೇಶದಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಚರಣೆ, ಇವುಗಳ ಬಗ್ಗೆ ಮಾಹಿತಿ ನೀಡಿದರು.ಹೆಡ್ ಕಾನ್ಸ್ಟೇಬಲ್ ಗಳಾದ ಸಿಟಿ ದಿವಕರ್ ರೆಡ್ಡಿ, ಸಿ.ಟಿ ಅಲ್ಬಿನ್ , ಸಿ.ಟಿ ಸತೀಶ್ ನಾಯ್ಕ್, ಸಿ.ಟಿ ಸಿರಿಲಾಲ್ ಇವರುಗಳು ಯಾವ ರೀತಿ ಅಪಘಾತಗಳು ಸಂಭವಿಸಿದಾಗ ಮುನ್ನೇ಼ಚರಿಕೆ ಕ್ರಮವನ್ನು ಡೆಮೋ ಮಾಡಿ ತೋರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯರಾದ ಸುರೇಶ್ .ಕೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಪ್ರಯೋಜನೆಗಳನ್ನು ವಿವರಿಸಿದರು.


ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು, ವಿದ್ಯಾರ್ಥಿಗಳಾದ ಮಾನ್ಯ ಸ್ವಾಗತಿಸಿದರು, ರಕ್ಷಿತಾ ವಂದಿಸಿದರು, ಶ್ರುತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಡಾ| ಅನಿತಾ ದಯಾಕರ್ ರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Suddi Udaya

ದಿ| ಕಾಶಿ ಶೆಟ್ಟಿ ಸ್ಮರಣಾರ್ಥ ದೇವನಾರಿ ಬಂಗಾಡಿ ಸ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ ವಿತರಣೆ

Suddi Udaya

ಉಜಿರೆ ಎಸ್‌.ಡಿ‌.ಎಂ ಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶೋಭಾ ಪಿ ಜೀವಂದರ್ ರವರಿಗೆ ಪಿ.ಎಚ್.ಡಿ ಪದವಿ

Suddi Udaya

ನಾಲ್ಕೂರು: ಸೂಳಬೆಟ್ಟು ನಿವಾಸಿ ಪ್ರತಿಭಾ ಜೋಶಿ ನಿಧನ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಉಜಿರೆಯ ಅನುಗ್ರಹ ಆಂ.ಮಾ. ಶಿಕ್ಷಣ ಸಂಸ್ಥೆಗೆ ಹಲವು ಪ್ರಶಸ್ತಿಗಳು

Suddi Udaya

ಡಾ|| ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಸುದ್ದಿ ಉದಯ ವಾರಪತ್ರಿಕೆಯಿಂದ ವಿಶೇಷ ಪುರವಾಣಿ

Suddi Udaya
error: Content is protected !!