July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾಲ್ – ಬ್ಯಾಡ್ಮಿಂಟನ್ ಪಂದ್ಯಾಟ: ಕಾಯರ್ತಡ್ಕ ಸ.ಪ್ರೌ. ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ಕಾಯರ್ತಡ್ಕ: ಸರಕಾರಿ ಪ್ರೌಢಶಾಲೆ ಕಾಯರ್ತಡ್ಕದಲ್ಲಿ ನಡೆದ ಬೆಳ್ತಂಗಡಿ ತಾಲ್ಲೂಕು ಮಟ್ಟದ 17ರ ವಯೋಮಾನದೊಳಗಿನ ಮಕ್ಕಳ ಬಾಲ್ – ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಕಾಯರ್ತಡ್ಕ ಪ್ರಥಮ ಸ್ಥಾನ ಪಡೆದು ಜಿಲ್ಲಾ ಹಂತಕ್ಕೆ ಆಯ್ಕೆಯಾಯಿತು.

ತಾಲ್ಲೂಕು ಮಟ್ಟದ ಬಾಲ್ – ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ತಾಲ್ಲೂಕು ಕ್ರೀಡಾ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ ಇವರು ದೀಪ ಬೆಳಗಿಸಿ ಉದ್ಘಾಟನೆಗೈದು ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾದ ಶ್ರೀ ಪದ್ಮನಾಭ ಗೌಡ ಇವರು ಕ್ರೀಡಾಸ್ಫೂರ್ತಿಯಿಂದ ಆಟವಾಡುವಂತೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತುಗಳನ್ನು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಸ್ಪರ್ಧೆಯಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ತಂಡಗಳು ಪರಸ್ಪರ ಸೆನಸಾಡಿ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಮಚ್ಚಿನ ಹಾಗೂ ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ ಅಂತಿಮ ಸುತ್ತನ್ನು ಪ್ರವೇಶಿಸಿತ್ತು. ಅಂತಿಮ ಪಂದ್ಯದಲ್ಲಿ ಎರಡೂ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ ಜಯಗಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

ವಿಜೇತ ತಂಡಗಳಿಗೆ ಹಾಗೂ ರನ್ನರ್ಸ್ ಆಪ್ ತಂಡಗಳಿಗೆ ಟ್ರೋಫಿ, ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು. ಪಂದ್ಯಾಕೂಟದ ಯಶಸ್ವಿಗೆ ಶಿಕ್ಷಕರು, ಶಾಲಾ ಆಡಳಿತ ಸಮಿತಿ ಸದಸ್ಯರು, ದಾನಿಗಳು ಸಹಕಾರ ನೀಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತರಬೇತು ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಪ್ರಕಾಶ್ ಎ ಜೆ ಇವರನ್ನು ಪ್ರಶಂಶಿಲಾಯಿತು.

Related posts

ರಾಜ್ಯಮಟ್ಟದ ಹ್ಯಾಂಡ್‌ಬಾಲ್ : ಉಜಿರೆಯ ಎಸ್.ಡಿ.ಎಂ ಗೆ ಅವಳಿ ಪ್ರಶಸ್ತಿ

Suddi Udaya

ಬಿಜೆಪಿ ಶಿಶಿಲ ಶಕ್ತಿ ಕೇಂದ್ರದ ಪ್ರಮುಖ್ ರಾಗಿ ಸಂದೀಪ್ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ: ಡಯಾಲಿಸಿಸ್ ಯಂತ್ರ ದುರಸ್ತಿ ಮಾಡದಿರುವುದಕ್ಕೆ ಅಧಿಕಾರಿಗಳಿಗೆ ತರಾಟೆ

Suddi Udaya

ಸುಲ್ಕೇರಿ: ಅನುದಾನಿತ ಖಾಸಗಿ ಹಿ.ಪ್ರಾ. ಹಾಗೂ ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿ ರಹಿಮಾನ್ ಪಡ್ಪು ಆಯ್ಕೆ

Suddi Udaya

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ: ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಅಂಡಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಭಂಡಾರಿ ಕನ್ಯಾಡಿ

Suddi Udaya
error: Content is protected !!