22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ತೆನೆ ಹಬ್ಬ (ಮೊಂತಿ ಹಬ್ಬ)

ಮಡಂತ್ಯಾರು: ಇಲ್ಲಿಯ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಮೇರಿ ಮಾತೆಯ ಜನ್ಮ ದಿನವನ್ನು ಸೆ. 8ರಂದು ಮೊಂತಿ(ತೆನೆ ಹಬ್ಬ) ಹಬ್ಬವಾಗಿ ಆಚರಿಸಿದರು.
ಚರ್ಚ್‌ಗಳಲ್ಲಿ ಬಲಿಪೂಜೆ ಯಲ್ಲಿ ಪಾಲ್ಗೊಂಡು ತಮ್ಮ ಮನೆಗಳಲ್ಲಿ ಹೊಸ ಅಕ್ಕಿ ಕುಟುಂಬ ಸಮೇತರಾಗಿ ಊಟವನ್ನು ಸವಿದಿದ್ದಾರೆ.


ಮೊಂತಿ ಹಬ್ಬದಂದು ಕನ್ಯಾ ಮರಿಯಮ್ಮನಿಗೆ ಪ್ರಾರ್ಥನೆ, ಪ್ರಧಾನ ದಿವ್ಯ ಬಲಿಪೂಜೆ ನಡೆಯಿತು. ಬಲಿ ಪೂಜೆ ಧರ್ಮಗುರು ವಂ. ಫಾ. ಮೇಲ್ವಿನ್ ನೋರೋನ್ಹ ಅರ್ಪಿಸಿದರು. ಮಡಂತ್ಯಾರು ಚರ್ಚ್ ನ ಸಹಾಯಕ ಧರ್ಮಗುರು ವಂ. ಫಾ. ಲೇರಿನ ಪಿಂಟೊ ಸಂದೇಶ ನೀಡಿದರು. ಮಡಂತ್ಯಾರು ಚರ್ಚ್ ನ ಪ್ರಧಾನ ಧರ್ಮಗುರು ವಂ. ಫಾ. ಸ್ಟ್ಯಾಂನಿ ಗೋವಿಸ್, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋ ಪಾಧ್ಯಯ ವಂ. ಫಾ. ದೀಪಕ್ ಡೆಸಾ, ವಂ. ಅನಿಲ್ ಪಾಯ್ಸ್ ಹಾಗೂ ಇನ್ನಿತರ ಧರ್ಮ ಗುರುಗಳು ಉಪಸ್ಥಿತರಿದ್ದರು.

ಬಳಿಕ ಹಬ್ಬದ ಪ್ರಯುಕ್ತ ಕುಟುಂಬಗಳಿಗೆ ತೆನೆ ವಿತರಣೆ, ಪುಷ್ಪಾರ್ಪಣೆ ಸಲ್ಲಿಸಿದ ಪುಟಾಣಿಗಳಿಗೆ ಕಬ್ಬು ವಿತರಿಸಲಾಯಿತು. .ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಆರ್ಥಿಕ ಸಮಿತಿ ಸದಸ್ಯರು, ಗುರಿಕಾರರು, ಚರ್ಚ್ ಪಾಲನ ಮಂಡಳಿ ಸದಸ್ಯರು, ಮುಖಂಡರು ಸಹಕರಿಸಿದರು.

Related posts

ಹೃದಯ ಸಮಸ್ಯೆಯಿಂದ ಮೃತಪಟ್ಟ ಬಾಲಕ ಅಶ್ವಿನ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಕನ್ಯಾಡಿ II ಸ.ಉ. ಹಿ. ಪ್ರಾ. ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Suddi Udaya

ನ.10: ಬಳಂಜ -ನಾಲ್ಕೂರು – ತೆಂಕಕಾರಂದೂರು ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಪ್ರಥಮ ವರ್ಷದ ಕೆಸರ್ದ ಲೇಸ್ ಬಲೇ ಗೊಬ್ಬುಗ

Suddi Udaya

ಕಡಿರುದ್ಯಾವರ ಹೇಡ್ಯದಲ್ಲಿ ಅಂಚೆ ಕಛೇರಿ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟುಓಡಿಲ್ನಾಳ ಗ್ರಾಮ ಸಮಿತಿಯಿಂದ ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆ

Suddi Udaya

ಕಣಿಯೂರು ಗ್ರಾ.ಪಂ. ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya
error: Content is protected !!