ಬೆಳ್ತಂಗಡಿ: ಕರವಾಳಿ ಜಿಲ್ಲೆಗಳ ಜೀವಾನಾಧರವಾಗಿರುವ ಅಡಿಕೆ ಬೆಳೆಗೆ ಕೊಳೆ ರೋಗ ಭಾದಿಸಿದ್ದು ರೈತರ ಬೆಳೆ ನಾಶವಾಗುತ್ತಿದ್ದು ಸೂಕ್ತ ಪರಿಹಾರ ಒದಗಿಸಬೇಕೆಂದು ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪ್ಯಾಕ್ಸ್ ಅಧ್ಯಕ್ಷ ಅಬ್ದುಲ್ ರಝಾಕ್ ಸಿಎಂಗೆ ಪತ್ರ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಬೆಳೆ ಅಡಿಕೆಯಾಗಿದ್ದು ಇಲ್ಲಿನ ರೈತರ ಪ್ರಮುಖ ಜೀವಾನಾಧರವೇ ಅಡಿಕೆ ಕೃಷಿಯಾಗಿದೆ. ಆದರೆ ಈ ವರ್ಷ ವಾಡಿಕೆಕ್ಕಿಂತ ಹೆಚ್ಚು ಮಳೆ ಸುರಿದು ಮಳೆ ಅಡಿಕೆ ಪಸಲು ಕೊಳೆ ರೋಗದಿಂದ ಶೇಕಡವಾರು ೭೦% ಅಡಿಕೆ ಬೆಳೆ ನಾಶವಾಗಿರುತ್ತದೆ. ಸದ್ರಿ ಅಡಿಕೆ ಬೆಳೆಯನ್ನು ನಂಬಿ ಜೀವನ ಸಾಗಿಸುವ ರೈತರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿAದ ಸಾಲ ಪಡೆದು ಕೃಷಿಗಳನ್ನು ಮಾಡಿರುವ ರೈತರು ಅಡಿಕೆ ಬೆಳೆಗೆ ಕೊಳೆ ರೋಗ ಭಾದಿಸಿ ಬಹಳಷ್ಟು ನಷ್ಟವನ್ನು ಹೊಂದಿದ್ದಾರೆ. ಆದುದರಿಂದ ರೈತರಿಗೆ ಕೊಳೆ ರೋಗದ ಬಗ್ಗೆ ಎಕ್ರೆಗೆ ಕನಿಷ್ಠ 4 ಲಕ್ಷ ರೂ. ಸರಕಾರ ಪರಿಹಾರವನ್ನು ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.











