38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಸೆ.16: ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ (ರಿ.), ಲಾಯಿಲ, ಬೆಳ್ತಂಗಡಿ ಮತ್ತು ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ, ಲಾಯಿಲ, ಬೆಳ್ತಂಗಡಿ ಇದರ ವತಿಯಿಂದ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆಯು ಶಿವಪ್ರಸಾದ್ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ಸೆ.16ರಂದು ಪೂರ್ವಾಹ್ನ 8:30ರಿಂದ ಲ್ಯಾಲ ವಿಶ್ವಕರ್ಮ ಸಭಾಭವನದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಲಿರುವುದು ಎಂದು ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್. ಗುಂಪಲಾಜೆ ಹಾಗೂ ಸಂಘಟಕರು ತಿಳಿಸಿರುತ್ತಾರೆ.

ಪೂರ್ವಾಹ್ನ ಧಾರ್ಮಿಕ ಸಭೆ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ಅಧ್ಯಕ್ಷ ಗಣೇಶ್ ಆಚಾರ್ಯ, ಬಲ್ಯಾಯಕೋಡಿ ವಹಿಸಲಿರುವರು. ಉಡುಪಿ & ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಇಂಜಿನಿಯರಿಂಗ್ ಕ್ಷೇತ್ರದ ಪ್ರತಿನಿಧಿ ಹರ್ಷ ವರ್ಧನ್ ನಿಟ್ಟೆ ಧಾರ್ಮಿಕ ಉಪನ್ಯಾಸವನ್ನು ನೆರವೇರಿಸಲಿರುವರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ ಸಿಂಹ ನಾಯಕ್, ಧಾರ್ಮಿಕ ಮುಖಂಡ ಕಿರಣ್‌ಂದ್ರ ಡಿ. ಪುಷ್ಪಗಿರಿ, ಉದ್ಯಮಿ, ಚಲನಚಿತ್ರ ನಟ, ಕಾರುಣ್ಯ ಸೇತು ಟ್ರಸ್ಟ್ ಸಂಸ್ಥಾಪಕ ಸ್ವಸ್ತಿಕ್ ಆರ್ಯ, ಗುರುವಾಯನಕೆರೆ ಶ್ರೀಕೃಷ್ಣ ಎಂಟರ್‌ಪ್ರೈಸಸ್ ನ ವಾಮನ ಆಚಾರ್ಯ, ಶ್ರೀಮತಿ ಸರಸ್ವತಿ ನಿರಂಜನ್ ಆಚಾರ್ಯ ಕೈಪ್ಲೋಡಿ ನಿವೃತ್ತ ಸರಕಾರಿ ನೌಕರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬೆಳ್ತಂಗಡಿ, ಎ ಬಾಲಕೃಷ್ಣ ಆಚಾರ್ಯ ಅಧ್ಯಕ್ಷರು ವಿಶ್ವಕರ್ಮ ಮಿತ್ರರು, ಎಂ. ಆರ್. ಪಿ. ಎಲ್. ಮಂಗಳೂರು, ಸುರೇಂದ್ರ ಆಚಾರ್ಯ ಕನ್ನಾಜೆ ಯುವ ಉದ್ಯಮಿಗಳು, ಸಿಲಿಕಾನ್ ಮೋಟಾರ್ಸ್, ಬೆಂಗಳೂರು, ಭಾಗವಹಿಸಲಿರುವರು. ಪಿ.ಎನ್. ರಮೇಶ್ ಆಚಾರ್ಯ, ಮದ್ದಡ್ಕ ಗೌರವ ಸಲಹೆಗಾರರು, ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘ, ಬೆಳ್ತಂಗಡಿ, ಶ್ರೀಮತಿ ಉಷಾ ಹರಿಪ್ರಸಾದ್ ಅಧ್ಯಕ್ಷರು, ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ, ಬೆಳ್ತಂಗಡಿ ಗೌರವ ಉಪಸ್ಥಿತರಿರುವರು.

ಮಧ್ಯಾಹ್ನ 2ರಿಂದ “ವಿ.ಎಸ್.ಡಿ ಶೋ ಮಾಸ್ಟರ್ಸ್ ಉಜಿರೆ” ಮತ್ತು “ಸ್ವರ ಮಾಧುರ್ಯ ಬೆಳ್ತಂಗಡಿ” ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದು. 3ರಿಂದ ವಿಶ್ವಕರ್ಮ ಯುವ ಕಲಾವಿದರ ಕೂಡುವಳಿಕೆಯಲ್ಲಿ “ಪಾಂಡವಾಶ್ವಮೇಧಾ”ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀದೇವಿಪ್ರಸಾದ್ ಆಚಾರ್ಯ ಗುರುವಾಯನಕೆರೆ, ಚೆಂಡೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮದ್ದಳೆಯಲ್ಲಿ ಪೂಜಾ ಆಚಾರ್ಯ ಶಿರ್ತಾಡಿ, ಚಕ್ರತಾಳ ಶ್ರೇಯಸ್ ಆಚಾರ್ಯ ವಾಮದಪದವು, ಮುಮ್ಮೇಳದಲ್ಲಿ ಪ್ರಸಿದ್ಧ ಯುವ ಕಲಾವಿದರು ಭಾಗವಹಿಸಲಿರುವರು.

Related posts

ಸೌಜನ್ಯ ಕೊಲೆ ಪ್ರಕರಣ : ಮರು ತನಿಖೆಗೆ ಒತ್ತಾಯಿಸಿ ಆ.27: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರುಗಳಿಂದ ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya

ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ವತಿಯಿಂದ 78ನೇ ವಷ೯ದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ದಕ್ಷಿಣ ಆಫ್ರಿಕಾದಲ್ಲಿ ಅಂತ್ಯಕ್ರಿಯೆವಾಗಲಿದ್ದ ಲಾಯಿಲದ ದಾಮೋದರ ಗೌಡ ರವರ ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

Suddi Udaya

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿ ಕಾಲಾವಕಾಶ ವಿಸ್ತರಣೆ

Suddi Udaya

ಕಲಾ ಸಿಂಚನ 2025: ಅನುಗ್ರಹ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಪ್ರಥಮ ಸ್ಥಾನ

Suddi Udaya

ವೇಣೂರು : ಟೈಲರ್ ಸಂಜೀವ ಪಾಣೂರು ಹೃದಯಾಘಾತದಿಂದ ನಿಧನ

Suddi Udaya
error: Content is protected !!