25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಧಾರ್ಮಿಕ ಕಾರ್ಯಕ್ರಮ

ವೇಣೂರು: ಹಿಂದೂ ಎನ್ನುವುದು ಜಾತಿಯಲ್ಲ, ಅದೊಂದು ಆದರ್ಶ ವ್ಯಕ್ತಿತ್ವ. ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕನಾಗುವವನೇ ಹಿಂದೂ. ಹಿಂದೂ ಧರ್ಮವು ವ್ಯಕ್ತಿಯನ್ನು ದೈವಿಕ ಶಕ್ತಿಯೊಂದಿಗೆ ಸಂಪರ್ಕಿಸಲು ಸಹಾಯ ಮಾಡುವ ಹಲವು ಆಚರಣೆಗಳನ್ನು ಒಳಗೊಂಡಿದೆ. ಉದಾಹರಣೆಗೆ, ಬೆಳಿಗ್ಗೆ ಕರ ದರ್ಶನ ಮಾಡುವುದು, ಊಟಕ್ಕೆ ಮೊದಲು ಅನ್ನಪೂರ್ಣ ದೇವಿಗೆ ಪ್ರಾರ್ಥಿಸುವುದು, ಮತ್ತು ಸಂಜೆ ತುಳಸಿ ಮಾತೆಗೆ ದೀಪ ಹಚ್ಚುವುದು.

ಧರ್ಮ ಶಿಕ್ಷಣದ ಕೊರತೆಯಿಂದಾಗಿ ಹಿಂದೂ ಸಮಾಜ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಂಧಾನುಕರಣೆ ಮಾಡುತ್ತಿದ್ದು, ಇದು ಯುವ ಪೀಳಿಗೆಯನ್ನು ದಾರಿತಪ್ಪಿಸುತ್ತಿದೆ.
ಮನುಷ್ಯ ಜನ್ಮದ ಅಂತಿಮ ಗುರಿ ಈಶ್ವರ ಪ್ರಾಪ್ತಿ. ಹಿಂದೂ ಧರ್ಮದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳಲ್ಲಿ, ಧರ್ಮ ಶಿಕ್ಷಣದ ಕೊರತೆಯಿಂದಾಗಿ ಧರ್ಮ ಮತ್ತು ಮೋಕ್ಷ ಕಣ್ಮರೆಯಾಗುತ್ತಿವೆ. ಇದರಿಂದ ಜನರು ಈಶ್ವರ ಪ್ರಾಪ್ತಿಯ ಗುರಿಯಿಂದ ದೂರವಾಗುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ತಿಳಿಸಿದರು.

ವೇಣೂರಿನ ಗೋಳಿಯಂಗಡಿಯ ದೇವಾಡಿಗರ ಸಮುದಾಯ ಭವನದಲ್ಲಿ ಸ್ಥಳೀಯ ಧರ್ಮಪ್ರೇಮಿಗಳ ಸಹಭಾಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಧಾರ್ಮಿಕ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ವೇಣೂರಿನ ಹರೀಶ ಶೆಟ್ಟಿ, ಸೋಮನಾಥ , ಸಂದೀಪ, ಸೀತಾರಾಮ ಆಚಾರ್ಯ, ಲಕ್ಷ್ಮಣ ಮುಂತಾದ 400ಕ್ಕೂ ಅಧಿಕ ಹಿಂದುತ್ವನಿಷ್ಠರು ಭಾಗಿಯಾಗಿದ್ದರು.

Related posts

ಚಾರ್ಮಾಡಿ ಘಾಟ್ ನಲ್ಲಿ ಎರಡು ವಾಹನಗಳು ರಸ್ತೆಗೆ ಪಲ್ಟಿ

Suddi Udaya

ಉಜಿರೆ :ಎಸ್ .ಡಿ.ಎಂ.ಶಿಕ್ಷಣ ಸಂಸ್ಥೆಯಿಂದ ರೂ 15.15 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

Suddi Udaya

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ” ಫಿಟ್ ಫೆಸ್ಟ್ 2024 “

Suddi Udaya

ತೆಂಕಕಾರಂದೂರು : ಜನಾರ್ದನ ಆಚಾರ್ಯ ರವರ ಮನೆಯ ಹಿಂಬದಿ ಗುಡ್ಡ ಕುಸಿತ

Suddi Udaya

ಗೇರುಕಟ್ಟೆ: ಬಿಜೆಪಿ ಬೃಹತ್ ಪ್ರಚಾರ ಸಭೆ

Suddi Udaya

ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya
error: Content is protected !!