March 7, 2026
Uncategorized

ಸೆ .13: ಶ್ರವಣಬೆಳಗೊಳದ ಮಹಾಸ್ವಾಮೀಜಿ ಬೆಳ್ತಂಗಡಿ ಪುರ ಪ್ರವೇಶ

ಬೆಳ್ತಂಗಡಿ: ಸೆಪ್ಟೆಂಬರ್ 13ರಂದು ಜೈನ ಧರ್ಮೀಯರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರವಣಬೆಳಗೊಳದ ಜಗದ್ಗುರು ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟಾಚಾರ್ಯವರ್ಯ ಮಹಾಸ್ವಾಮಿಗಳು ,ಶ್ರೀ ಜೈನಮಠ, ಶ್ರವಣಬೆಳಗೊಳ ಇವರು ಬೆಳ್ತಂಗಡಿಯ ಇತಿಹಾಸ ಪ್ರಸಿದ್ಧವಾದ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಇಲ್ಲಿಗೆ ಬೆಳಗ್ಗೆ 9ಗೆ ಪುರ ಪ್ರವೇಶ ಮಾಡಲಿದ್ದಾರೆ. ಇವರನ್ನು ಸಮಾಜ ಬಾಂಧವರು ಭವ್ಯತೆಯಿಂದ ಸ್ವಾಗತಿಸಲಿದ್ದಾರೆ.

ಸದ್ರಿ ದಿನದಂದು ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯಲ್ಲಿ ನಡೆಯಲಿರುವ ಚಂದನ ಷಷ್ಟಿಯ ಉದ್ಯಾಪನೆಯಲ್ಲಿ ದಿವ್ಯ ಪಾವನ ಸಾನಿಧ್ಯ ವಹಿಸಿಕೊಂಡು ಮಾರ್ಗದರ್ಶನ ನೀಡಲಿರುವರು. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಕೆ ಜಯರಾಜ್ ಇಂದ್ರರವರ ತಂಡದವರು ಪೂಜಾ ವಿಧಿ ವಿಧಾನ ನಡೆಸಿಕೊಡಲಿದ್ದಾರೆ.

ಆ ಬಳಿಕ ಮಧ್ಯಾಹ್ನ ವಿಶ್ವಶಾಂತಿ, ವಿಶ್ವದೆಲ್ಲೆಡೆ ನೆಮ್ಮದಿ, ವಿಶ್ವ ಸುಬೀಕ್ಷೆಗಾಗಿ ಅಪರಾಹ್ನ 2 ಗಂಟೆಗೆ ದಿವ್ಯ ಮಂಗಲ ಪ್ರವಚನ ಮಾಡಲಿರುವರು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ವಹಿಸಿಕೊಳ್ಳಲಿದ್ದಾರೆ. ಈ ಪುಣ್ಯ ಮಹಾಪರ್ವದಲ್ಲಿ ಸರ್ವರೂ ಭಾಗವಹಿಸುವಂತೆ ಧರಣೇಂದ್ರ ಕೆ.ಜೈನ್ ವಿನಂತಿಸಿರುತ್ತಾರೆ.

Related posts

ಮಡಂತ್ಯಾರು ರಸ್ತೆಯ ಬದಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆೆ ಸಾರ್ವಜನಿಕರ ಒತ್ತಾಯ

Suddi Udaya

ನಿಡಿಗಲ್ ಹಳೆ ಸೇತುವೆ ಪರಿಸರದಲ್ಲಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ: ದಂಡ ವಸೂಲಿ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

Suddi Udaya

ಬಳಂಜ ಶಾಲಾ ಪ್ರಾರಂಭೋತ್ಸವ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

Suddi Udaya

ವೇಣೂರು: ಕುಣಿತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!