September 6, 2026
Uncategorized

ಬಳಂಜ ಶಾಲಾ ಪ್ರಾರಂಭೋತ್ಸವ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಬೆಳ್ತಂಗಡಿ: 2025-26 ನೇ ಸಾಲಿನ ವರ್ಷದ ಶಾಲಾ ಪ್ರಾರಂಬೋತ್ಸವ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಅಂಕಪಡೆದ ವಿದ್ಯಾರ್ಥಿಗಳನ್ನು ಅಬಿನಂದಿಸುವ ಕಾರ್ಯಕ್ರಮವು ಸ.ಉ.ಪ್ರೌಢ ಶಾಲಾ ಬಳಂಜದಲ್ಲಿ ಜೂ.2 ರಂದು ನಡೆಯಿತು.

ಕಾರ್ಯಕ್ರಮವನ್ನು ಪ್ರೌಢಶಾಲಾ ಪೋಷಕರ ಸಂಘದ ಅಧ್ಯಕ್ಷ, ಜನಜಾಗೃತಿ ವೇದಿಕೆಯ ಸ್ಥಾಪಕಾದ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ ಉದ್ಘಾಟಿಸಿ ಮಾತನಾಡಿ ಎಸ್ ಎಸ್ ಎಲ್ ಸಿ ಯಲ್ಲಿ ಬಳಂಜ ಶಾಲೆಯು ಶೇ. 100 ಫಲಿತಾಂಶ ಪಡೆದು ಊರಿಗೆ ಕೀರ್ತಿಯನ್ನು ತಂದಿದ್ದಾರೆ. ಶಿಕ್ಷಕರ ಶ್ರಮವೂ ಇದರಲ್ಲಿದೆ. ಇವರ ಶ್ರಮ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಶಾಲೆಯ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮತ್ತು ಶಾಲೆಯ ಅಬಿವೃದ್ದಿಗೆ ಬಳಂಜ ಶಿಕ್ಷಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದು ಸರಕಾರಿ ಶಾಲಾ ಮಕ್ಕಳ ಹಾಗೂ ಸರಕಾರಿ ಶಾಲೆಯ ಪ್ರೀತಿಯನ್ನು ಸಮಾಜದ ಮುಂದೆ ತೋರಿಸುತ್ತಿದೆ. ಮಕ್ಕಳ ಪೋಷಕರು ನಿರಂತರವಾಗಿ ಶಿಕ್ಷಕರ ಜೊತೆ ಸಂಪರ್ಕದಲ್ಲಿ ಇರಬೇಕು ಎಂದರು.

ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಮಾತನಾಡಿ ಬಳಂಜ ಶಾಲೆಯು 75 ರ ಸಂಭ್ರಮದಲ್ಲಿದ್ದು ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸ್ಥಾನವನ್ನು ಅಲಂಕರಿಸಿದ್ದಾರೆ. ಸರಕಾರಿ ಶಾಲೆಯ ಶಿಕ್ಷಣ ಮತ್ತು ಸೌಲಭ್ಯಗಳು ಯಾವ ಖಾಸಗಿ ಶಾಲೆಯಲ್ಲಿ ಸಿಗಲಾರದು. ಇಲ್ಲಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರಯುತ ಶಿಕ್ಷಣದ ಜೊತೆ ಇಂಗ್ಲೀಷ್ ಕಲಿಕೆ,ಕಂಪ್ಯೂಟರ್ ಶಿಕ್ಷಣ ನೀಡಲು ಶಿಕ್ಷಣ ಟ್ರಸ್ಟ್ ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ಅದರಲ್ಲು ಸರಕಾರಿ ಶಾಲೆಯ ಮಕ್ಕಳು ಉತ್ತಮ ಶಿಕ್ಷಣ ಪಡೆದು ಶ್ರೇಷ್ಠ ವ್ಯಕ್ತಿಗಳಾಗಬೇಕು ಪೋಷಕರಿಗೆ ,ಊರಿಗೆ ಕೀರ್ತಿಯನ್ನು ತರಬೇಕು ಎಂದು ಟ್ರಸ್ಟ್ ನ ಉದ್ದೇಶವಾಗಿದ್ದು ಮುಂದಿನ ದಿನಗಳಲ್ಲಿ ಶಾಲೆಯ ಮೂಲಭೂತ ಅಬಿವೃದ್ದಿಗೆ ಶ್ರಮಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾದ್ಯಕ್ಷೆ ಸುಶೀಲಾ, ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನ ರಾಜ್ ಪೇರಂದಬೈಲ್, ಟ್ರಷ್ಟಿಗಳಾದ ಪ್ರಮೋದ್ ಕುಮಾರ್ ಜೈನ್, ರಾಕೇಶ್ ಹೆಗ್ಡೆ ಬಳಂಜ, ಪ್ರವೀಣ್ ಕುಮಾರ್ ಹೆಚ್ ಎಸ್, ಅಮೃತ ಮಹೋತ್ಸವ ಸಮಿತಿ ಅದ್ಯಕ್ಷ ಚಂದ್ರಶೇಖರ್ ಪಿ ಕೆ, ಉಮಾಮಹೇಶ್ವರ ಯುವಕ ಮಂಡಲದ ಅದ್ಯಕ್ಷ ಸುಖೇಶ್ ಹಾನಿಂಜ, ಜ್ಯೋತಿ ಮಹಿಳಾ ಮಂಡಲದ ಅದ್ಯಕ್ಷೆ ಚೇತನಾ,ಬಳಂಜ ಗ್ರಾ.ಪಂ ಸದಸ್ಯ ರವೀಂದ್ರ ಬಿ ಅಮೀನ್ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ ಸ್ವಾಗತಿಸಿ, ಗೌರವ ಶಿಕ್ಷಕಿ ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಮಲ್ಲಿಕಾರ್ಜುನ ವಂದಿಸಿದರು.

ಬಾಕ್ಸ್ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನಗಳೊಂದಿಗೆ ಗೌರವಿಸಲಾಯಿತು. ಅಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಇವರ ವ್ಯಾಂಕ್ಟಿವಾ ಕಂಪೆನಿ ವತಿಯಿಂದ ಮಕ್ಕಳಿಗೆ ಪುಸ್ತಕ, ಬ್ಯಾಗ್, ಕಿಟ್ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಯುಕೆಜಿ, ಎಲ್ ಕೆ ಜಿ ಮಕ್ಕಳ ಸಹಿತ ಎಲ್ಲಾ ಮಕ್ಕಳನ್ಬು ಹೂ ಗುಚ್ಚ ನೀಡಿ ಬ್ಯಾಂಡ್ ಸೆಟ್ ನೊಂದಿಗೆ ಗಣ್ಯರು ,ಪೋಷಕರು ಸ್ವಾಗತಿಸಿದರು.

Related posts

ರೇಷ್ಮೆರೋಡ್ ಬಳಿಯ ಪೆಟ್ರೋಲ್ ಗುಣಮಟ್ಟ ಅಸಮಪ೯ಕ ಆರೋಪ : ರಿಕ್ಷಾ ಚಾಲಕರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಉಜಿರೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನ,ಬೆ. ತಾ ಶ್ರೀ ಮೊಗೇರ ಸಮಾಜ ಸೇವಾ ಸಮಿತಿ ಎರ್ನೋಡಿ ವತಿಯಿಂದ ಸ್ವಾತಂತ್ರೋತ್ಸವ

Suddi Udaya

ಅಂಡಿಂಜೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ನಿತಿನ್, ಉಪಾಧ್ಯಕ್ಷರಾಗಿ ಶ್ವೇತಾ ಅವಿರೋಧವಾಗಿ ಆಯ್ಕೆ

Suddi Udaya

ಅಳಕ್ಕೆ ಬ್ರೈಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ರಕ್ಷಿತ್ ಶಿವರಾಮ್

Suddi Udaya

ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋಗುವವರ ಗಮನಕ್ಕೆ: ಜುಲೈ 31ರವರೆಗೆ ವಾಹನ ಸಂಚಾರ ನಿರ್ಬಂಧ

Suddi Udaya

ಉಜಿರೆ ಶ್ರೀ. ಧ. ಮಂ ಆಂ.ಮಾ.(ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!