ಬೆಳ್ತಂಗಡಿ: ಆರ್ಥಿಕವಾಗಿ ಅತ್ಯಂತ ಕಡು ಬಡತನದಲ್ಲಿರುವ ವೇಣೂರು, ಕರಿಮಣೇಲು, ಹೊಸಂಗಡಿ, ಬಜಿರೆ ಮತ್ತು ಗುಂಡೂರಿ ಗ್ರಾಮದ 10 ನಿವಾಸಿಗಳಿಗೆ ಅಂತರಾಷ್ಟ್ರೀಯ ಲಯನ್ಸ್ ನಿಧಿಯಿಂದ ಮತ್ತು ಲಯನ್ಸ್ ಜಿಲ್ಲೆ 317ಡಿ ಯಿಂದ ಕೊಡಲ್ಪಟ್ಟ ಆಹಾರ ಕಿಟ್ ಮತ್ತು ಬೆಡ್ ಶೀಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ| ಜಗದೀಶ್ ಚಂದ್ರ ಡಿ.ಕೆ, ಲಯನ್ಸ್ ಕ್ಲಬ್ ವೇಣೂರು ಕಾರ್ಯದರ್ಶಿ ಲ| ಜಯರಾಮ್ ಹೆಗ್ಡೆ, ಕೋಶಾಧಿಕಾರಿ ಲ| ಸತೀಶ್ ಚಿಗುರು, ಲ| ಗಿರೀಶ್ ಕೆ ಎಸ್, ಲ| ಸುರೇಶ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.











