23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 233.13 ಕೋಟಿ ವ್ಯವಹಾರ, ಸದಸ್ಯರಿಗೆ ಶೇ. 15 ಡಿವಿಡೆಂಟ್

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 11 ರಂದು ಸಂಘದ ಸಂಗಮ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 34.21 ಕೋಟಿ ಠೇವಣಿ ಹೊಂದಿದ್ದು, ರೂ. 42.82ಕೋಟಿ ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇ. 99%ರಷ್ಟು ವಸೂಲಾತಿ ಆಗಿರುತ್ತದೆ. ವಾರ್ಷಿಕ ರೂ. 233.13 ಕೋಟಿ ವ್ಯವಹಾರ ನಡೆಸಿ ಗರಿಷ್ಠ ರೂ. 1,20,34,914.68 ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15 ರಷ್ಟು ಡಿವಿಡೆಂಟ್ ನೀಡಿದೆ.

ಈ ವೆಳೆ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ , ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90 ಗಿಂತ ಹೆಚ್ಚಿನ ಅಂಕ ಗಳಿಸಿದ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು . ಅತೀ ಹೆಚ್ಚು ಗೊಬ್ಬರ ಖರೀದಿ ಮಾಡಿದ ಹಾಗೂ ಅತೀ ಹೆಚ್ಚು ಅಡಿಕೆ ಮಾರಾಟ ಮಾಡಿದ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹಾಬಲ, ನಿರ್ದೇಶಕರಾದ ವಿಠಲ ಭಂಡಾರಿ, ಉದಯ ಕುಮಾರ್, ಶ್ರೀನಾಥ್ ಬಿ., ಪದ್ಮನಾಭ್ ಗೌಡ ಕೆ., ಅಶ್ವಿನಿ ರವಿ ನಾಯ್ಕ್, ಪ್ರೇಮಾವತಿ, ಸುನಿಲ್ ಕೆ.,ರವಿಚಂದ್ರ ಪಿ, ವಿಶ್ವನಾಥ್ ಕಕ್ಕುದೋಳಿ, ಮುತ್ತಪ್ಪ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಸಿರಾಜುದ್ದೀನ್, ಹಾಗೂ ಸದಸ್ಯರು , ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಕೆ. ವಾರ್ಷಿಕ ವರದಿ ವಾಚಿಸಿ, ಗುಮಾಸ್ತ ಸುಂದರ ಗೌಡ ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಮೇಲಂತಬೆಟ್ಟು: ದರ್ಶನ್ ಯು ಸಾಲ್ಯಾನ್ ಅಸೌಖ್ಯದಿಂದ ನಿಧನ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಉಜಿರೆ: ಎಸ್.ಡಿ.ಎಂ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದಿಂದ “ಗ್ರಂಥಾಲಯದ ಪ್ರಾಮುಖ್ಯತೆ” ವಿಶೇಷ ಕಾರ್ಯಕ್ರಮ

Suddi Udaya

ಗೆಜ್ಜೆಗಿರಿ ಮೇಳದ “ಪ್ರಚಂಡ ಮಹಿಷಾಸುರ” ಪ್ರಸಂಗ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಡುಗಡೆ

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸಹಕಾರ ಭಾರತಿ ಸಮಿತಿ ಸಭೆ

Suddi Udaya
error: Content is protected !!