September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ : ರೂ.144ಕೋಟಿ ವ್ಯವಹಾರ, ಸದಸ್ಯರಿಗೆ ಶೇ.11 ಡಿವಿಡೆಂಟ್

ಗುರುವಾಯನಕೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ಮಹಾಸಭೆಯು ಸೆ.12ರಂದು ಸಂಘದ ಜೇಷ್ಠ ಸಭಾಭವನದಲ್ಲಿ ಜರುಗಿತು.

ಸಹಕಾರಿ ಸಂಘವು ಪ್ರಾರಂಭಗೊಂಡು 100ವರ್ಷ ಪೂರೈಸಿದ ಹಿನ್ನಲೆ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ನಾರಾಯಣ ರಾವ್ ಎಂ. ಅವರು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2024-25ರ ಸಾಲಿನಲ್ಲಿ ಒಟ್ಟು 2602 ಸದಸ್ಯರನ್ನು ಹೊಂದಿದ್ದು 2,39,34,710 ಪಾಲು ಬಂಡವಾಳ ಹೊಂದಿದೆ. ಒಟ್ಟು ರೂ. 31,79,31,476 ಠೇವಣಿ ಸಂಗ್ರಹವಾಗಿರುತ್ತದೆ. ರೂ.16,36,91,502 ಸಾಲ ವಿತರಿಸಿ, ರೂ.144ಕೋಟಿ ವ್ಯವಹಾರ ನಡೆಸಿ ರೂ.59,99,798 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.11 ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.

ಸಂಘವು ಶತಮಾನೋತ್ಸವದ ಹೊಸ್ತಿಲಲ್ಲಿ ಇರುವುದರಿಂದ ಸಂಘ ಪ್ರಾರಂಭಿಸಲು ಸಹಕಾರ ನೀಡಿದ ಹಿರಿಯ ಸದಸ್ಯರಿಗೆ ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ 75%ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಡಿಗ್ರಿ, ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್. ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ವಡಿವೇಲು ನಿರ್ದೇಶಕರಾದ ಭಗೀರಥ ಜಿ., ಸುಜಿತಾ ವಿ.ಬಂಗೇರ, ಸಚಿನ್ ಕುಮಾರ್ ನೂಜೋಡಿ, ಅನಂತರಾಜ್ ಜೈನ್, ನಾರಾಯಣ ಪೂಜಾರಿ, ಪುರಂದರ ಶೆಟ್ಟಿ, ಅರುಣ್ ಕುಮಾರ್, ಜಯಂತಿ, ಮೋಹನ್ ನಾಯ್ಕ, ಶಶಿರಾಜ್ ಶೆಟ್ಟಿ, ಡಿ.ಸಿ.ಸಿ. ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಮಮತಾ, ಚೇತನ ಕೆ., ಭಾಗ್ಯಶ್ರೀ ಡಿ., ಮಧುರಾಜ್ ಎಸ್. ವಿ., ಅಕ್ಷತ್, ಯಶೋಧ ಸಹಕರಿಸಿದರು.

Related posts

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಬಕ್ರೀದ್ ಆಚರಣೆ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನಗೈದು ಮಾನವೀಯತೆ ಮೆರೆದ ಉಜಿರೆಯ ದಿಕ್ಷೀತಾ

Suddi Udaya

ಕೊಲ್ಪಾಡಿಯಲ್ಲಿ ಮಕ್ಕಳ ಹುಣ್ಣಿಮೆಯ ಪ್ರಯುಕ್ತ ಆಟೋಟ ಸ್ಪರ್ಧೆ ಉದ್ಘಾಟನೆ

Suddi Udaya

ಬೆಳ್ತಂಗಡಿ ಜೈನ ಬಸದಿ ಬಳಿ ಕಾರುಗಳೆರಡು ಪರಸ್ಪರ ಡಿಕ್ಕಿ: ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

Suddi Udaya

ಕಣಿಯೂರು ಗ್ರಾ.ಪಂ. ನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ಬೆಳ್ತಂಗಡಿ 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಚಾಲನೆ

Suddi Udaya
error: Content is protected !!