22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಸೆ. 14 : ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ , ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಶ್ರೀಮತಿ ಕಾಶಿ ಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಗುರುವಾಯನಕೆರೆ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಬಂಟರ ಸಂಘ ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಸೆ 14 ಭಾನುವಾರ ಬೆಳಿಗ್ಗೆ 10.30 ರಿಂದ ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಸಂಘದ ಗೌರವ ಮಾರ್ಗದರ್ಶಕರು ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ನೆರವೇರಿಸಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅನೂಪ್ ಎ ಶೆಟ್ಟಿ ಐಪಿಎಸ್, ಡಿಸಿಪಿ ಬೆಂಗಳೂರು ನಗರ, ಅಜಿತ್ ಎಂ. ಕೆಎಎಸ್, ಸ್ಪೆಷಲ್ ಲ್ಯಾಂಡ್ ಎಕ್ಸೇಷನ್ ಆಫೀಸರ್ ,ಎಆರ್ ಐ ಡಿಇ, ಬೆಂಗಳೂರು, ಹಸ್ತಾ ಶೆಟ್ಟಿ ಎಸಿಎಫ್ (ಪ್ರೊಬೇಶನ್) ಮಂಗಳೂರು ವಲಯ, ವಿಜಯ ಜೆ. ಶೆಟ್ಟಿ ಹಾಲಾಡಿ ಗೌರವ ಕಾರ್ಯದರ್ಶಿ ಬಂಟರ ಸಂಘ ಬೆಂಗಳೂರು, ಜಯರಾಜ್. ಬಿ. ರೈ ಅಧ್ಯಕ್ಷರು ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಂಗಳೂರು, ಜಯಂತ ಶೆಟ್ಟಿ ಕುಂಟಿನಿ ಉಪಾಧ್ಯಕ್ಷರು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಜಯರಾಮ ಭಂಡಾರಿ ಮಾತೃ ಸಂಘ ತಾಲೂಕು ಸಂಚಾಲಕರು,ಜಯರಾಮ ಶೆಟ್ಟಿ ಮುಂಡಾಡಿಗುತ್ತು, ನಿರ್ದೇಶಕರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಭಾಗವಹಿಸಲಿದ್ದಾರೆ.

Related posts

ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ, ರತ್ನಗಿರಿ ಪುನರ್ ಪ್ರತಿಷ್ಠಾ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಬಿ.ಎಸ್ಸಿ. ಕೃಷಿ ಸ್ನಾತಕ ಪದವಿಯಲ್ಲಿ ಪ್ರಥಮ ಶ್ರೇಣಿ ಪಡೆದ ತೆಕ್ಕಾರುವಿನ ಅಕ್ಷತಾ ರಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶ್ರೀ ರಾಮಕ್ಷೇತ್ರ ಕನ್ಯಾಡಿಯಲ್ಲಿ ರಾಮ ನಾಮ ತಾರಕ ಮಂತ್ರ ಪಠಣ

Suddi Udaya

ಅಳದಂಗಡಿ: ಸುದ್ದಿ ಉದಯ ವಾರಪತ್ರಿಕೆ ವರದಿಗೆ ಅಳದಂಗಡಿ ಗ್ರಾ.ಪಂನಿಂದ ಸ್ಪಂದನೆ: ಶೋಚನೀಯ ಸ್ಥಿಯಲ್ಲಿದ್ದ ಸೋರುತ್ತಿದ್ದ ಮನೆಯ ಮೇಲ್ಚಾವಣಿ ತೆರವು: ಮೇಲ್ಛಾವಣಿಗೆ ಶೀಟ್ ಅಳವಡಿಕೆಯ ಕೆಲಸ ಪ್ರಾರಂಭ,ಸಾರ್ವಜನಿಕರಿಂದ ಮೆಚ್ಚುಗೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಎರಡನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಕುಕ್ಕೇಡಿ:ಕೋಟಿ ಚೆನ್ನಯ ಸೇವಾ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya
error: Content is protected !!