ಬೆಳ್ತಂಗಡಿ: ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿ ಇಲ್ಲಿ “ಚಂದನ ಷಷ್ಟಿ” ನೋಂಪಿ ಉದ್ಯಾಪನೆ ಗೆ ಆಗಮಿಸಿದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಜೈನಮಠ ಶ್ರವಣಬೆಳಗೊಳ ಇವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಅವರು ಭೇಟಿ ಮಾಡಿ ಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನೇತಾರಾದ ಪ್ರಸಾದ್ ಕುಮಾರ್,ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ವಿದ್ಯಾ ಕುಮಾರ್ ಜೈನ್, ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿ ಯ ಸದಸ್ಯರಾದ ಸುಪ್ರೀತ್ ಜೈನ್ ಉಪಸ್ಥಿತರಿದ್ದರು.












