ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆ

ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆಯು ಕ್ಷೇತ್ರದ ಅಧ್ಯಕ್ಷ ರಾಜು ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಸೆ.13 ರಂದು ನಡೆಯಿತು.

ಸಭೆಯಲ್ಲಿ ಕ್ಷೇತ್ರದ ನೂತನ ಅಧ್ಯಕ್ಷ ರಾಜು ಪೂಜಾರಿ, ಪ್ರಧಾನ ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ, ಕೋಶಾಧಿಕಾರಿ ಶಶಿಕಲಾ ಮಡಂತ್ಯಾರು, ಜಿಲ್ಲಾ ಸದಸ್ಯರಾದ ಕುಶಾಲಪ್ಪಗೌಡ , ಶಾಂಭವಿ ಪಿ ಬಂಗೇರ, ನಾಗೇಶ್ ಕುಮಾರ್, ರವೀಂದ್ರ ಗೇರುಕಟ್ಟೆ ಕ್ಷೇತ್ರದ ಉಪಾಧ್ಯಕ್ಷ ವಸಂತ ಪೂಜಾರಿ ಹಾಗೂ ವಲಯದ ಅಧ್ಯಕ್ಷರು , ಕಾರ್ಯದರ್ಶಿ , ಕೋಶಾಧಿಕಾರಿ ಹಾಗೂ ಸದಸ್ಯರು ಭಾಗವಹಿಸಿದ್ದರು.


ಸಭೆಯನ್ನು ಉದ್ದೇಶಿಸಿ ಕುಶಾಲಪ್ಪ ಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅದೇ ರೀತಿ ಲ್ಯಾನ್ಸಿ ಡಿಸೋಜಾ, ರಾಜು ಪೂಜಾರಿ, ಶಾಂಭವಿ ಪಿ. ಬಂಗೇರ ಬಂಗೇರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಹೊಸ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಯವರನ್ನು 9 ವಲಯಗಳ ಅಧ್ಯಕ್ಷರು ಮತ್ತು ಅಳದಂಗಡಿ ವಲಯದ ಸದಸ್ಯರು ಸೇರಿ ಗೌರವಿಸಿದರು.

ವತ್ಸಲ ಉಜಿರೆ ಪ್ರಾರ್ಥಿಸಿ, ಸದಾನಂದ ನಿರೂಪಿಸಿ, ಮೋಹನ್ ದಾಸ್ ಸ್ವಾಗತಿದರು. ವಸಂತ್ ಪೂಜಾರಿ ಧನ್ಯವಾದವಿತ್ತರು.

Related posts

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಉಜಿರೆಯ ಪ್ರತೀಕ್ ಶೆಟ್ಟಿ ರಿಗೆ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಉಜಿರೆ ಪಂಚಾಯತ್‌ನ ಎಂಆರ್‌ಎಫ್ ಘಟಕಕ್ಕೆ ಭೇಟಿ

Suddi Udaya

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗದ ಮಹಾಸಭೆ

Suddi Udaya

ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ

Suddi Udaya

ನಾಳ: ಹೆದ್ದಾರಿ ಮೇಲೆ ಉರುಳಿ ಬಿದ್ದ ಮರ, ಕಿಲೋಮೀಟರ್ ದೂರ ವಾಹನ ದಟ್ಟಣೆ

Suddi Udaya

ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರೌಢಶಾಲೆಯ ದಾಖಲೆಯ ಫಲಿತಾಂಶ

Suddi Udaya
error: Content is protected !!