22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ: ‘ ದಾನ ಪುರುಷಾರ್ಥ ‘ ಭಿತ್ತಿಪತ್ರಿಕೆ ಅನಾವರಣ

ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರ ಚತುರ್ದಾನಗಳ ಕುರಿತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ‘ ದಾನ ಪುರುಷಾರ್ಥ ‘ ನಾಮಾಂಕಿತ ಭಿತ್ತಿಪತ್ರಿಕೆಯನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ಅನಾವರಣಗೊಳಿಸಿ ಶುಭ ಹಾರೈಸಿದರು.

ಭಿತ್ತಿಪತ್ರಿಕೆಯನ್ನು ವೀಕ್ಷಿಸಿದ ಡಾ. ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳನ್ನು ಹರಸಿದರು ಹಾಗೂ ಮಂಜುಶ್ರೀ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಅನುವು ಮಾಡಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಪಪೂ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ , ಉಪಪ್ರಾಚಾರ್ಯ ಡಾ. ರಾಜೇಶ್ ಬಿ. , ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಭಿತ್ತಿಪತ್ರಿಕೆಯನ್ನು ರಚಿಸಿದ ವಿದ್ಯಾರ್ಥಿಗಳಾದ ಸಂಕೀರ್ತನಾ , ಅಮೂಲ್ಯ ಪ್ರಭು , ಧೃತಿ ಪಿ ಶೆಟ್ಟಿ ಮತ್ತು ಕ್ಷಿಪ್ರಪ್ರಸಾದ ಇವರು ಉಪಸ್ಥಿತರಿದ್ದರು.

Related posts

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಭಯೋತ್ಪಾದಕರ ದಾಳಿ ಖಂಡಿಸಿ ಮಲವಂತಿಗೆ – ಮಿತ್ತಬಾಗಿಲು ಗ್ರಾಮಸ್ಥರ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ

Suddi Udaya

ಗರ್ಡಾಡಿ: ಬೋಳಿಯಾರ್ ನಲ್ಲಿ 25 ಮೇಕೆಯ ತಲೆ ಕಡಿದು ಪ್ರಮುಖರ ಫೋಟೋ ಬಳಸಿ ವಾಮಾಚಾರ

Suddi Udaya

ಕಲ್ಮಂಜ : ಬಜಿಲ ರಸ್ತೆಯಲ್ಲಿ ನೀರು ನಿಂತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ : ಸ್ಥಳಕ್ಕೆ ತಹಶೀಲ್ದಾರ್ ಭೇಟಿ; ವೀಕ್ಷಣೆ

Suddi Udaya

ಬಂದಾರು ಗ್ರಾಮಸ್ಥರಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಕೆನರಾ ಬ್ಯಾಂಕಿನ ಡಿಜಿಎಮ್ , ಮಂಗಳೂರು ರೀಜಿನಲ್ ಮೆನೇಜರ್ ಹಾಗೂ ರುಡ್ ಸೆಟ್ ಅಧಿಕಾರಿಗಳು ಭೇಟಿ: ದೇವರಿಗೆ ರಂಗಪೂಜೆ ಸೇವೆ

Suddi Udaya

ಕುವೆಟ್ಟು : ಶಕ್ತಿನಗರ- ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಮಾಡಿಸಿಕೊಡುವ ಬಗ್ಗೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya
error: Content is protected !!