September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುರತ್ಕಲ್ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಸಭಾಂಗಣದ ಲೋಕಾರ್ಪಣೆ

ಸುರತ್ಕಲ್ ‘ಅನುಪಲ್ಲವಿ’ಯಲ್ಲಿರುವ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣಾ ಸಮಾರಂಭದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ತಮ್ಮ ಆಶೀರ್ವಚನ ಭಾಷಣ ಸಂದರ್ಭ ಪ್ರತಿಮನೆಗಳೂ ನಮ್ಮ ಕಲೆ , ಸಂಸ್ಕೃತಿಗಳನ್ನು ಬೆಳೆಸುವ ಪುಟ್ಟ ಕೇಂದ್ರಗಳಾದಾಗಬೇಕೆಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು .


ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನವೀಕರಣ ಕಾರ್ಯಕ್ಕೆ ವಿಶೇಷ ನೆರವು ನೀಡಿದ ಡಿ. ಅಣ್ಣು ದೇವಾಡಿಗ ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ ರೆಮೋನಾ ಇವರನ್ನು ಸನ್ಮಾನಿಸಲಾಯಿತು.


ಅತಿಥಿಗಳಾಗಿ ಪ್ರದೀಪ ಕುಮಾರ ಕಲ್ಕೂರ ,ಎ ಕೃಷ್ಣಮೂರ್ತಿ ರಾವ್, ಡಾ. ಕೆ ರಾಜ್ ಮೋಹನ್ ರಾವ್,ಉಮಾ ಉದಯಶಂಕರ್ ಹಾಗೂ ಶ್ರೀಶಕುಮಾರ್ ಎಂ ಕೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ದಿವ್ಯಶ್ರೀ ಇವರಿಂದ ಸಂಗೀತ ಕಛೇರಿ ನಡೆಯಿತು. ಇವರಿಗೆ ವಯಲಿನ್ ನಲ್ಲಿ ತನ್ಮಯೀ ಉಪ್ಪಂಗಳ ,ಮೃದಂಗದಲ್ಲಿ ಪನ್ನಗ ಶರ್ಮನ್ ಹಾಗೂ ತಂಬೂರದಲ್ಲಿ ಸುಜಾತ ಎಸ್ ಭಟ್ ಸಹಕರಿಸಿದರು. ಅಕಾಡೆಮಿಯ ಕಾರ್ಯದರ್ಶಿ, ಪಿ ನಿತ್ಯಾನಂದರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ,ಶ್ರೇಯ ಕೊಳತ್ತಾಯ ಕಾರ್ಯಕ್ರಮ ನಿರ್ವಹಿಸಿದರು.

Related posts

ಉಜಿರೆ: ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಮಚ್ಚಿನ: ಬಂಗೇರಕಟ್ಟೆ ಕಲ್ಲಗುಡ್ಡೆಯಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಗೆ ಸನ್ಮಾನ

Suddi Udaya

ಸಂಪೂರ್ಣ ಹದಗೆಟ್ಟ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ: ಅನುದಾನ ಬಿಡುಗಡೆಗೊಳಿಸುವಂತೆ ಸಚಿವರಿಗೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಜೆಇಇ, ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ನ ಸುಪ್ರೀತ್ ಎಂ ಬಡಿಗೇರ ಜಿಲ್ಲೆಗೆ ಪ್ರಥಮ

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ

Suddi Udaya
error: Content is protected !!