September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಲಾಯಿಲ: ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಮತ್ತು ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಲಾಯಿಲ ಇದರ ವತಿಯಿಂದ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆಯು ಶಿವಪ್ರಸಾದ್ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ಸೆ.16ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ಜರಗಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ವಹಿಸಿದ್ದರು. ಉಡುಪಿ & ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಇಂಜಿನಿಯರಿಂಗ್ ಕ್ಷೇತ್ರದ ಪ್ರತಿನಿಧಿ ಹರ್ಷ ವರ್ಧನ್ ನಿಟ್ಟೆ ಧಾರ್ಮಿಕ ಉಪನ್ಯಾಸವನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ, ಚಲನಚಿತ್ರ ನಟ, ಕಾರುಣ್ಯ ಸೇತು ಟ್ರಸ್ಟ್ ಸಂಸ್ಥಾಪಕ ಸ್ವಸ್ತಿಕ್ ಆರ್ಯ, ಗುರುವಾಯನಕೆರೆ ಶ್ರೀಕೃಷ್ಣ ಎಂಟರ್‌ಪ್ರೈಸಸ್ ನ ವಾಮನ ಆಚಾರ್ಯ, ಶ್ರೀಮತಿ ಸರಸ್ವತಿ ನಿರಂಜನ್ ಆಚಾರ್ಯ ಕೈಪ್ಲೋಡಿ ನಿವೃತ್ತ ಸರಕಾರಿ ನೌಕರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬೆಳ್ತಂಗಡಿ, ಎ ಬಾಲಕೃಷ್ಣ ಆಚಾರ್ಯ ಅಧ್ಯಕ್ಷರು ವಿಶ್ವಕರ್ಮ ಮಿತ್ರರು, ಎಂ. ಆರ್. ಪಿ. ಎಲ್. ಮಂಗಳೂರು, ಸುರೇಂದ್ರ ಆಚಾರ್ಯ ಕನ್ನಾಜೆ ಯುವ ಉದ್ಯಮಿಗಳು, ಸಿಲಿಕಾನ್ ಮೋಟಾರ್ಸ್, ಬೆಂಗಳೂರು, ಭಾಗವಹಿಸಿದರು.

ಪಿ.ಎನ್. ರಮೇಶ್ ಆಚಾರ್ಯ, ಮದ್ದಡ್ಕ ಗೌರವ ಸಲಹೆಗಾರರು, ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘ, ಬೆಳ್ತಂಗಡಿ, ಪುಷ್ಪ ಗಣೇಶ್ ಆಚಾರ್ಯ ಬಲ್ಯಾಯಕೋಡಿ ಗೌರವ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ಗಾಯತ್ರಿ ಪ್ರಾರ್ಥಿಸಿದರು. ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್ ರವರು ಸ್ವಾಗತಿಸಿದರು. ರುಕ್ಮಯ ಆಚಾರ್ಯ ಕನ್ನಾಜೆ & ರಾಜೇಶ್ ಆಚಾರ್ಯ ನಿರೂಪಿಸಿದರು.

ಮಧ್ಯಾಹ್ನ “ವಿ.ಎಸ್.ಡಿ ಶೋ ಮಾಸ್ಟರ್ಸ್ ಉಜಿರೆ” ಮತ್ತು “ಸ್ವರ ಮಾಧುರ್ಯ ಬೆಳ್ತಂಗಡಿ” ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಶ್ವಕರ್ಮ ಯುವ ಕಲಾವಿದರ ಕೂಡುವಳಿಕೆಯಲ್ಲಿ “ಪಾಂಡವಾಶ್ವಮೇಧಾ” ಯಕ್ಷಗಾನ ಕಾರ್ಯಕ್ರಮ ನಡೆಯಿತು.

Related posts

ಬಳಂಜ: ಬಂಟರ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ದಿ. ಅನಿಲ್ ನಾಯ್ಗ ಟ್ರೋಫಿಯ ಕ್ರೀಡೋತ್ಸವ: ಸನ್ಮಾನ

Suddi Udaya

ಸವಿ ಇಲೆಕ್ಟ್ರಾನಿಕ್ಸ್ ಹೌಸ್ ಆಫ್ ಫರ್ನಿಚರ್ಸ್ & ಹೋಮ್ ಅಪ್ಲಾಯನ್ಸ್, ಸವಿ ಫೂಟ್ ವೇರ್ ಹಾಗೂ ಪ್ರಗತಿ ಎಲೆಕ್ಟ್ರಿಕಲ್ & ರೆಫ್ರಿಜರೇಷನ್ ಸೇಲ್ಸ್ & ಸರ್ವಿಸ್ ಮಳಿಗೆ ಶುಭಾರಂಭ

Suddi Udaya

ಸೆ.13, 14 : ವಾಣಿ ಕಾಲೇಜಿನಲ್ಲಿ ತುಳು ಸಾಹಿತ್ಯ ರಚನಾ ಕಮ್ಮಟ

Suddi Udaya

ಬೆಳಾಲು ಎನ್ ಎಸ್ ಎಸ್ ಶಿಬಿರಾರ್ಥಿ ಮತ್ತು ಪಂಚಾಯತ್ ವತಿಯಿಂದ ಸ್ವಚ್ಛತಾ ಅಭಿಯಾನ

Suddi Udaya

ಶ್ರೀ. ಧ. ಮಂ. ಪ. ಪೂ.ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ

Suddi Udaya

ಮಚ್ಚಿನದಲ್ಲಿ ಗ್ರಾಮಮಟ್ಟದ ಬಾಲ ಮೇಳ ಕಾರ್ಯಕ್ರಮ

Suddi Udaya
error: Content is protected !!