32.9 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿಧಾರ್ಮಿಕವರದಿ

ಉಜಿರೆ: ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನದ ವಿಜ್ಞಾಪನಾ ಪತ್ರ ಬಿಡುಗಡೆ

ಉಜಿರೆ: ಸೆ.14ರಂದು ಉಜಿರೆಯ ಈ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ‘ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನ ಉಜಿರೆ ಇದರ ವಿಜ್ಞಾಪನಾ ಪತ್ರವನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಇವರು ಬಿಡುಗಡೆ ಮಾಡಿ ಮಾತನಾಡುತ್ತಾ, ಯಕ್ಷಗಾನ ಎಂಬುವುದು ಒಂದು ಅರ್ಥಪೂರ್ಣವಾದ ಕಾರ್ಯಕ್ರಮ ಉಜಿರೆ ಯಕ್ಷಗಾನಕ್ಕೆ ಹಿಂದಿನಿಂದಲೇ ಆಶ್ರಯ ಕೇಂದ್ರವಾಗಿದೆ. ಇದಕ್ಕೆ ಜನಾರ್ಧನ ಸ್ವಾಮಿ ದೇವರ ಸಂಪೂರ್ಣ ಅನುಗ್ರಹ ಇರುತ್ತದೆ. ಮತ್ತು ಯಕ್ಷಗಾನದಿಂದ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯ ಎಂದರು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಹಿರಿಯ ಯಕ್ಷಗಾನ ಗುರುಗಳಾದ ಕೆ.ಮೋಹನ್ ಬೈಪಾಡಿತ್ತಾಯರವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಾಟ್ಯ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ, ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನ (ರಿ) ಸಮಿತಿಯ ಎಲ್ಲಾ ಸದಸ್ಯರು, ಕಲಾ ಪೋಷಕರು, ಕಲಾ ತಂಡದ ಎಲ್ಲಾ ವಿದ್ಯಾರ್ಥಿ /ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸಮಿತಿಯ ಕಾರ್ಯದರ್ಶಿ ಸಚಿನ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮಕ್ಕೆ ಸತೀಶ ನಾಯ್ಕರವರು ಸ್ವಾಗತಿಸಿ, ವಂದನಾರ್ಪಣೆ ಗೈದರು.

Related posts

ಮಡಂತ್ಯಾರು ಬ್ರದರ್ಸ್ ಸಾಲುಮರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಗೆ ವಿಮಾ ಕ್ಷೇತ್ರದ ಗೌರವ

Suddi Udaya

ಹೊಕ್ಕಾಡಿಗೋಳಿ: ಶ್ರೀ ಮಹಿಷ ಮರ್ದಿನಿ ಕಂಬಳ ಸಮಿತಿ: ವೀರ ವಿಕ್ರಮ ಜೋಡುಕರೆ ಬಯಲು ಕಂಬಳದ ಕರೆ ಮುಹೂರ್ತ

Suddi Udaya

ಬೆಳ್ತಂಗಡಿ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದಿಂದ ಆರೋಗ್ಯ ಇಲಾಖೆ ಭೇಟಿ ಹಾಗೂ ಪರಿಸರ ದಿನಾಚರಣೆ

Suddi Udaya

ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರ ಉದ್ಘಾಟನೆ

Suddi Udaya

ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಈಶ್ವರ ಬೈರ ಮನೆಗೆ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಹರೀಶ್ ಪೂಂಜ ಭೇಟಿ

Suddi Udaya
error: Content is protected !!