37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಕೊಯ್ಯೂರು: “ಶಿಕ್ಷಕರು ಶಾಲೆಯಲ್ಲಿ ಮಾತ್ರವಲ್ಲದೇ ಸಮಾಜದಲ್ಲಿ ಬೆರೆತಾಗ ಜನಮಾನಸದಲ್ಲಿ ಉಳಿಯುತ್ತಾರೆ. ಶಿಕ್ಷಕರಿಗೆ ಗೌರವ ಸಿಗುವುದು ಅವರ ಪಾಂಡಿತ್ಯದಿಂದಲ್ಲ ಬದಲಾಗಿ ಅವರ ವ್ಯಕ್ತಿತ್ವದಿಂದಾಗಿ” ಎಂದು ನಿವೃತ್ತ ಮುಖ್ಯ ಶಿಕ್ಷಕ ಧರ್ಣಪ್ಪ ಗೌಡ ಹಲೆಕ್ಕಿ ಅಭಿಪ್ರಾಯಪಟ್ಟರು.


ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಜಿ ಯೋಧ ಹಾಗೂ ನಿವೃತ್ತ ಉಪನ್ಯಾಸಕ ಹರೀಶ್ ರೈ ಹಾಗೂ ಕೊಯ್ಯೂರು ಸರ್ಕಾರಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕ ಸುಧಾಕರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು.


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಪಾಂಬೇಲು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಪ್ರಾಚ್ಯ ವಸ್ತು ಸಂಗ್ರಾಹಕ ಹಳ್ಳಿ ಮನೆ ಹೈದರಾಲಿ ಮತ್ತು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರಾಚಾರ್ಯ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಧರ್ಣಪ್ಪ ಗೌಡ ಹಲೆಕ್ಕಿ ಮತ್ತು ನಿವೃತ್ತ ಉಪನ್ಯಾಸಕ ಹರೀಶ್ ರೈ ಉಜಿರೆ-ಇವರುಗಳನ್ನು ಕಾಲೇಜು ವತಿಯಿಂದ ಅಭಿನಂದಿಸಲಾಯಿತು.
ವಿದ್ಯಾರ್ಥಿನಿಯರಾದ ವಿದ್ಯಾ, ವಿನಯ, ಐಶ್ವರ್ಯ, ಸಹಲಾ, ಚಿರಸ್ವಿ ಪ್ರಾರ್ಥನೆ ಗೈದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ವಿದ್ಯಾರ್ಥಿನಿ ರಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸ್ವರೂನ್ ಸ್ವಾಗತಿಸಿ, ವಿದ್ಯಾರ್ಥಿ ರಮೀಜ್ ವಂದಿಸಿದರು. ವಿದ್ಯಾರ್ಥಿನಿಯರಾದ ಅಂಕಿತ ಮತ್ತು ದಿವ್ಯ ಅಭಿನಂದನಾ ಪತ್ರ ವಾಚಿಸಿದರು. ವಿದ್ಯಾರ್ಥಿನಿಯರಾದ ವಿನಯ, ವಂಶಿಕ, ಸೌಜನ್ಯ ಕಾರ್ಯಕ್ರಮ ನಿರ್ವಹಣೆಗೈದರು.

Related posts

ಬೆಳ್ತಂಗಡಿ: ತಿಮರೋಡಿ ಗಡಿಪಾರು ಆದೇಶ ಪ್ರಕರಣ ಹಿಂಪಡೆಯುವಂತೆ ತಹಶೀಲ್ದಾರ್ ಟಪ್ಪಾಲು ಮೂಲಕ ಮನವಿ

Suddi Udaya

ಬೆಳ್ತಂಗಡಿ ಚರ್ಚ್ ರೋಡ್ ಬಳಿ ಚರಂಡಿಗೆ ವಾಲಿದ ಕಾರು

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರದಲ್ಲಿ ಗಾಲಿಕುರ್ಚಿ ಜಾಥಾ

Suddi Udaya

ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಪೆರಿಂಜೆ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್ ಸಿಸಿ. ಎನ್‌ಎಸ್‌ಎಸ್. ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!