25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮರ ಬಿದ್ದರು, ವಿದ್ಯುತ್ ವ್ಯತ್ಯಾಸವಾದರೂ ಸಮರ್ಪಕವಾಗಿ ಸ್ಪಂದಿಸದ ಮೆಸ್ಕಾಂ ಇಲಾಖೆ: ಮಿತ್ತಬಾಗಿಲು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆರೋಪ:ಎರಡು ತಿಂಗಳೊಳಗೆ ಜೆಜೆಎಂ ಕೆಲಸ ಪೂರ್ಣವಾಗದಿದ್ದರೆ ಕಚೇರಿ ಎದರು ಧರಣಿ: ಗ್ರಾ‌ಪಂ ಅಧ್ಯಕ್ಷ ವಿನಯಚಂದ್ರ

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಪ್ರಥಮ‌ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ವಿನಯಚಂದ್ರ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ಸೆ.18 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ನೀರು ಸರಬುರಾಜು ಯೋಜನೆಯ ಇಂಜಿನಿಯರ್ ಲಕ್ಷ್ಮೀ ಸಭೆಯನ್ನು ಮುನ್ನಡೆಸಿದರು. ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಸ್ಥರು ಹಲವಾರು ಚರ್ಚೆಗಳು, ಸಲಹೆ, ಸೂಚನೆಗಳನ್ನು ನೀಡಿದರು. ಹಲವಾರು ಬೇಡಿಕೆಗೆ ಪಂಚಾಯತ್ ಅಧ್ಯಕ್ಷ ವಿನಯಚಂದ್ರ ಶೀಘ್ರವಾಗಿ ಸ್ಪಂದಿಸುತ್ತೇವೆಂದು ಭರವಸೆ ನೀಡಿದರು.

ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಗ್ರಾಮಸ್ಥರಿಗೆ ಪಿಡಿಓ ಮೋಹನ್ ಬಂಗೇರ ಪ್ರತಿಜ್ಞಾ ವಿಧಿ ಭೋದಿಸಿದರು.ಮರ ಬಿದ್ದರು,ವಿದ್ಯುತ್ ವ್ಯತ್ಯಾಸವಾದರೂ ಮೆಸ್ಕಾಂ ಇಲಾಖೆ ಸಮರ್ಪಕವಾಗಿ ಸ್ಪಂದಿಸುದಿಲ್ಲ ಎಂದು ಗ್ರಾಮಸ್ಥರ ಆರೋಪಿಸಿದರು. ಗ್ರಾ‌ಪಂ ಅಧ್ಯಕ್ಷ ವಿನಯಚಂದ್ರ ಮಾತನಾಡಿ ಗ್ರಾಮದ ಅಭಿವೃದ್ದಿಗೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಜೆಜೆಎಂ ಕೆಲಸ ಪೂರ್ಣವಾಗಿಲ್ಲ. ಇನ್ನೂ ಎರಡು ತಿಂಗಳೊಳಗೆ ಕೆಲಸ ಆಗಿಲ್ಲದಿದ್ದರೆ ಸಂಬಂಧಿಸಿದ ಇಲಾಖಾ ಎದರು ಧರಣಿ ಮಾಡುತ್ತೇವೆ ಎಂದರು.

ಉಪಾಧ್ಯಕ್ಷೆ ವಿಜಯ ಕೆ,ಸದಸ್ಯರಾದ ಅಹಮ್ಮದ್ ಕಬೀರ್,ಚಂದ್ರಶೇಖರ ಗೌಡ, ಚೇತನಾ, ರಾಮಣ್ಣ, ಮೋಹಿನಿ, ಲತಾ, ಶಾಂಭವಿ, ಶಾಹುಲ್ ಹಮೀದ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಓ ಮೋಹನ ಬಂಗೇರ ಕೆ ಸ್ವಾಗತಿಸಿದರು, ಸಿಬ್ಬಂದಿ ಮಧುಕರ್ ವರದಿ ಮಂಡಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Related posts

ಕುದ್ಯಾಡಿಗುತ್ತು ಕೃಷ್ಣಮ್ಮ ಅಣ್ಣಿ ಪೂಜಾರಿ ನಿಧನ

Suddi Udaya

ತೆಂಕುಬೈಲು ಪಿಲಿಚಾಮುಂಡಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದೈವಗಳ ಪತ್ತನಾಜೆ ನೇಮೋತ್ಸವ

Suddi Udaya

ಸ್ಪಂದನಾ ವಿಜಯರಾಘವೇಂದ್ರ ಪಾರ್ಥೀವ ಶರೀರದ ದರ್ಶನ ಪಡೆದ ಶಾಸಕ ಹರೀಶ್ ಪೂಂಜ

Suddi Udaya

ನಡ: ಹೊಕ್ಕಿಲ ನಿವಾಸಿ ಕುಸುಮ ನಿಧನ

Suddi Udaya

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಗೆಜ್ಜೆಗಿರಿ ಮೇಳದ “ಪ್ರಚಂಡ ಮಹಿಷಾಸುರ” ಪ್ರಸಂಗ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಡುಗಡೆ

Suddi Udaya
error: Content is protected !!