25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

ಅಂಡಿಂಜೆ : ಗ್ರಾಮ ಪಂಚಾಯತ್ ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಎರಡನೇ ವರ್ಷದ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಆಶಾ ನೆಲ್ಲಿಂಗೇರಿ ಇವರ ಅಧ್ಯಕ್ಷತೆಯಲ್ಲಿ ಸೆ.18 ರಂದು ಶ್ರೀ ರಾಮ ಶ್ರೀ ವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಮುಂಡೇವು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ತಾಲೂಕು ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಪ್ರತಿಮಾ ಮಾತನಾಡಿ ಸಂಜೀವಿನಿ ಯೋಜನೆಯ ಮಹಿಳೆಯರು ಹೇಗೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಯೋಜನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಮುಖ್ಯಪುಸ್ತಕ ಬರಹಗಾರರಾದ ಶ್ರೀಮತಿ ಮಲ್ಲಿಕಾ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು ಮತ್ತು ಅನುಮೋದನೆಯನ್ನು ಪಡೆಯಲಾಯಿತು. ಶ್ರೀದೇವಿ ಸಂಜೀವಿನಿ ಸದಸ್ಯೆ ಶ್ರೀಮತಿ ಶಾಂಭವಿ ಶೆಟ್ಟಿ, ಪರಿಸರ ಸ್ನೇಹಿ ಜೂಟ್ ಬ್ಯಾಗ ತಯಾರಿಸಿದ್ದು ಅದನ್ನು ಸಂಜೀವಿನಿ ಬ್ರಾಂಡ್ ಅಸ್ಮಿತೆ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು.

ಒಕ್ಕೂಟದ ವ್ಯಾಪ್ತಿಯಲ್ಲಿರುವ ಪಂಚ ಸೂತ್ರಗಳನ್ನು ಪಾಲಿಸುವ ಉತ್ತಮ ದಾಖಲಾತಿಗಾಗಿ ಸಂಘಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಸಾಯಿ ಸಂಜೀವಿನಿ ಸಾವ್ಯ ಪ್ರಥಮ. ಸ್ವರ್ಣ ಸಂಜೀವಿನಿ ನೆಲ್ಲಿಂಗೇರಿ ದ್ವಿತೀಯ. ಭಾಗ್ಯಲಕ್ಷ್ಮಿ ಸಂಜೀವಿನಿ ಅಂಡಿಂಜೆ ಗೆ ತೃತೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿಸರ್ಗ ಸಂಜೀವಿನಿ ಗ್ರಾಮ್ ಪಂಚಾಯತ್ ಮಟ್ಟದ ಒಕ್ಕೂಟದ ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.

ಶ್ರೀಮತಿ ಸುದರ್ಶನಿ ಹೆಗ್ಡೆ ಇದನ್ನು ಮಂಡಿಸಿದರು. ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ನಡೆಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಮತಿ ಸುದರ್ಶಿನಿ ಹೆಗ್ಡೆ, ಉಪಾಧ್ಯಕ್ಷರಾಗಿ ಶ್ರೀಮತಿ ರಮಣಿ ಹೆಗ್ಡೆ, ಕಾರ್ಯದರ್ಶಿಯಾಗಿ ಶ್ರೀಮತಿ ಶಾಲಿನಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಸರೋಜಾ, ಕೋಶಾಧಿಕಾರಿಯಾಗಿ ಸುಹಾಸಿನಿ, ಸದಸ್ಯರಾಗಿ ಮಲ್ಲಿಕಾ ಎಸ್, ಮೋಹಿನಿ ನಾಯ್ಕ, ನೀಲಮ್ಮ ವನಿತಾ ಹೆಗ್ಡೆ, ಸೌಮ್ಯ, ಮರಿಯಾಶಾಂತಿ ,ವನಿತಾ, ಚಂದ್ರಿಕಾ, ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು.

ಜಿಲ್ಲಾ ಸಂಜೀವಿನಿ ವ್ಯವಸ್ಥಾಪಕಿ ಶ್ರೀಮತಿ ಶಕುಂತಲಾ ಮಾತನಾಡಿ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಬೆಳ್ತಂಗಡಿ ತಾಲೂಕು, ಕೃಷಿಯೇತರ ವ್ಯವಸ್ಥಾಪಕ ನಿತೀಶ್ ಕುಮಾರ್ ಮಾತನಾಡಿ ಸದಸ್ಯರಿಗೆ ಬ್ಯಾಂಕ್ ಸಾಲದ ಬಗ್ಗೆ ಮಾಹಿತಿ ,ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಬೇಕಾದ ಸರ್ಟಿಫಿಕೇಟ್ ಗಳ ಬಗ್ಗೆ, ಉತ್ಪನ್ನಗಳ ಬ್ರಾಂಡಿಂಗ್, ಲೇಬಲಿ0ng ಬೇಕಾದ ಮಾಹಿತಿಯನ್ನು ನೀಡಿದರು .ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಸಹಕಾರ ನೀಡಿದರು. ಸದಸ್ಯರಿಗೆ ರಸಪ್ರಶ್ನೆ ಕಾರ್ಯಕ್ರಮ ,ನೂತನ ಪದಾಧಿಕಾರಿಗಳಿಗೆ ಪದಗ್ರಹಣ ,ಮಾದಕ ವ್ಯಸನ ಮುಕ್ತ ಕರ್ನಾಟಕ ಪ್ರತಿಜ್ಞೆ ವಿಧಿ ಬೋಧಿಸಿದರು. ಲಿಂಗತ್ವ ದೌರ್ಜನ್ಯ ನಿವಾರಣೆ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟದಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಧ್ಯಕ್ಷೆ ಶ್ರೀಮತಿ ಆಶಾ ನೆಲ್ಲಿಂಗೇರಿ ಶ್ರೀಮತಿ ಆಶಾ ಇವರಿಗೆ ಗೌರವ ಸನ್ಮಾನ ಮಾಡಲಾಯಿತು .

ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ, ಸದಸ್ಯರುಗಳಾದ ಜಗದೀಶ್ ಹೆಗ್ಡೆ, ಹರೀಶ್ ಹೆಗ್ಡೆ, ಪರಮೇಶ್ವರ, ಶ್ರೀಮತಿ ಸರೋಜಾ, ಶ್ರೀಮತಿ ಸುಜಾತ, ಶ್ರೀಮತಿ ಜಯಂತಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಆರಂಭೋಡಿ ಎಂಬಿಕೆ ಸುಮತಿ ,ಹೊಸಂಗಡಿ ಎಂಬಿಕೆ ಸುಮಾ ಕಾಶಿಪಟ್ಣ ಎಂಬಿಕೆ ಶ್ರೀಮತಿ ಉಷಾಲತಾ, ಮರೋಡಿ ಎಂಬಿಕೆ ಶ್ರೀಮತಿ ಹರಿಣಾಕ್ಷಿ ವೇಣೂರು ಎಂಬಿಕೆ ಸುಲತ ಉಪಸ್ಥಿತರಿದ್ದರು.

ಸಭೆಯಲ್ಲಿ ಹಾಜರಿದ್ದ ಉತ್ತಮ ಹಾಜರಾತಿ ಹೊಂದಿದ ಸಂಘ ವನ್ನು ಗುರುತಿಸಿ ಗೌರವಿಸಲಾಯಿತು. ಶ್ರೀದೇವಿ ಸಂಜೀವಿನಿ ಸದಸ್ಯೆ ಶ್ರೀಮತಿ ಜಯಮಾಲಾ ಇವರು ಪ್ರಾರ್ಥನೆ ಹಾಡಿದರು. ಶ್ರೀಮತಿ ರಮಣಿ ಹೆಗ್ಡೆ ಸ್ವಾಗತಿಸಿದರು. ಶ್ರೀಮತಿ ಸೌಮ್ಯ ಪ್ರಶಾಂತ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಮಮತಾ ಕಾರ್ಯಕ್ರಮದ ಛಾಯಾಗ್ರಾಹಕರಾಗಿ ಮತ್ತು ವತ್ಸಲ ಸುನೀತ ಸಹಕರಿಸಿದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುರೇಖಾ ಧನ್ಯವಾದ ನೀಡಿದರು. ಮಹಾಸಭೆಯಲ್ಲಿ 300ಕ್ಕಿಂತಲೂ ಅಧಿಕ ಸ್ವಸಹಾಯ ಸಂಘದ ಸದಸ್ಯರು .,ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು .

Related posts

ಉರ್ಬಂದಗುಡ್ಡೆ ಫ್ರೆಂಡ್ಸ್ ಮರೋಡಿ ಬಳಗದವರಿಂದ ಪೆರಾಡಿ-ಮರೋಡಿ ಸಂಪರ್ಕ ರಸ್ತೆ ದುರಸ್ತಿ

Suddi Udaya

ಮೊಗ್ರು; ಶ್ರೀ ರಾಮ ಶಿಶು ಮಂದಿರದ ನಾಲ್ಕನೇ ವರ್ಷದ ವಾರ್ಷಿಕೋತ್ಸವ, ಭಾರತ್ ಮಾತಾ ಪೂಜಾನ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಶಾಂತಿವನ ಮಣ್ಣ ಸಂಕ ಅರಣ್ಯ ಪ್ರದೇಶದ ಗುಡ್ಡಕ್ಕೆ ಬೆಂಕಿ

Suddi Udaya

ಉಜಿರೆ: ಶ್ರೀ. ಧ. ಮಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಶ್ವ ಸಂಗೀತ ದಿನ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ವಿಶೇಷ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಮಗನನ್ನು ರಕ್ಷಿಸಲು ಹೋಗಿ ತಂದೆ ನೀರುಪಾಲು

Suddi Udaya
error: Content is protected !!