September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳಿಯ ವೈಷ್ಣವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

ಕಳಿಯ : ವೈಷ್ಣವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಕಳಿಯ ಇದರ ಮಹಾಸಭೆಯನ್ನು ಸೆ.18 ರಂದು ಕಳಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿಜಯ ಹೆಚ್ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಮತ್ತು ವಲಯ ಮೇಲ್ವಿಚಾರಕಿ ಶ್ರೀಮತಿ ವೀಣಾ ಶ್ರೀ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಪಂಚಾಯಿತಿನ ಅಧ್ಯಕ್ಷ ದಿವಾಕರ ಇವರು ಹಾಗೂ ಒಕ್ಕೂಟದ ಅಧ್ಯಕ್ಷ ವಿಜಯಹೆಚ್ ಪ್ರಸಾದ್, ಉಪಾಧ್ಯಕ್ಷೆ ರೀತಾ ಹಾಗೂ ಕಾರ್ಯದರ್ಶಿ ಶ್ರೀಮತಿ ರೇಷ್ಮಾ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಪ್ರಜ್ಞಾ ರವರು 2022-23 ಹಾಗೂ 2024-25 ರ ವಾರ್ಷಿಕ ವರದಿ ಮಂಡಿಸಿ ಖರ್ಚು ವೆಚ್ಚ ಹಾಗೂ ಆಸ್ತಿ ಜವಾಬ್ದಾರಿ ಯನ್ನು ಮಂಡಿಸಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾ ಶ್ರೀ ಇವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM)ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಂಜೀವಿನಿ ಯೋಜನೆಯ ದ್ಯೇಯೋದೇಶ ದ ಬಗ್ಗೆ ಜೀವನೋಪಾಯ ಚಟುವಟಿಕೆ ಬಗ್ಗೆ ಹಾಗೂ ಇತರ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.

ಅತ್ಯುತ್ತಮ ಪಶು ಸಖಿ ಯಾಗಿ ಪ್ರಶಸ್ತಿ ಪಡೆದ ರೂಪಾ ಇವರಿಗೆ ಒಕ್ಕೂಟದಿಂದ ಸನ್ಮಾನಿಸಲಾಯಿತು. ಅದೇ ರೀತಿ ಈ ಮೊದಲು ಇದ್ದ ಅಧ್ಯಕ್ಷ ರು ಮತ್ತು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಮತಾ ಸ್ವಾಗತಿಸಿದರು. ರೂಪಾರವರು ನಿರೂಪಿಸಿದರು. ಸುಪ್ರಿಯಾ ಧನ್ಯವಾದವಿತ್ತರು.

Related posts

ಬಿಜೆಪಿ ಯುವ ಮೋರ್ಚಾ ನಾಯಕರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು “ಸತ್ಯ ಧರ್ಮಕ್ಕೆ ಸಂದ ಜಯ”: ಶಾಸಕ ಹರೀಶ್ ಪೂಂಜ

Suddi Udaya

ಕೊಡಿಂಬಾಡಿ ಶಿವ ಕಾಂಪ್ಲೆಕ್ಸ್‌ನಲ್ಲಿ ಲಲಿತ ಮೆಡಿಕಲ್ಸ್ ಸ್ಟೋರ್‍ಸ್ ಶುಭಾರಂಭ

Suddi Udaya

ಡಾ.ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್

Suddi Udaya

ಉಜಿರೆ: ಅಗಲಿದ ಸಹಕಾರಿ ಧುರೀಣ ಇಚ್ಚಿಲ ಸುಂದರ ಗೌಡರಿಗೆ ನುಡಿನಮನ

Suddi Udaya

ಬೆಳ್ತಂಗಡಿ: ಬೆಳೆ ವಿಮೆ ಯೋಜನೆ : ವಿಮಾ ಕಂತು ಪಾವತಿಗೆ ಆ.7ರ ತನಕ ಅವಕಾಶ

Suddi Udaya

ಕಳಿಯ ಗ್ರಾಮದ ಕೊರಂಜ ನಿವಾಸಿ ಜಯಪ್ರಕಾಶ್ ನಿಧನ

Suddi Udaya
error: Content is protected !!