32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಬೋಡಿ ಇದರ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಶ್ರೀನಿವಾಸ್ ಶೆಟ್ಟಿಗಾರ್ ಸಭಾಂಗಣ ಭವನ ಹೊಕ್ಕಾಡಿಗೋಳಿ ಕೂಡುರಸ್ತೆಯಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು, ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಪ್ರಭಾಕರ್. ಎಚ್. ವಹಿಸಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಉಪವ್ಯವಸ್ಥಾಪಕರು ಡಾ. ಸತೀಶ್ ರಾವ್ ಹಾಲಿನ ಗುಣಮಟ್ಟ, ಮತ್ತು ಜಾನುವಾರುಗಳಲ್ಲಿ ಕಾಣಿಸುವ ಪ್ರಮುಖ ರೋಗಗಳು, ಒಕ್ಕೂಟ ದಿಂದ ಸಿಗುವ ವಿವಿಧ ಅನುದಾನಗಳು, ಅಲ್ಲದೆ ಇಲಾಖೆ ಯ ವಿವಿಧ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ, ಮಾಜಿ ದ.ಕ.ಹಾ.ಒಕ್ಕೂಟದ ನಿರ್ದೇಶಕರು ಪದ್ಮನಾಭ ಅರ್ಕಜೆ, ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಸುಕೀರ್ತಿ ಜೈನ್, ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಾರಂಭದ ಹಂತದಿಂದ ಇಲ್ಲಿಯ ವರೆಗೂ ಸತತವಾಗಿ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಿ, ಪ್ರಸ್ತುತ ವಿಸ್ತರಣಾಧಿಕಾರಿಯಾಗಿ ದರ್ಜೆ 1ಕ್ಕೆ ಭಡ್ತಿ ಹೊಂದಿದ ಶ್ರೀಮತಿ ಸುಚಿತ್ರ, ಹಾಗೂ ನೂತನ ದ.ಕ.ಸ.ಹಾಲು ಒಕ್ಕೂಟದ ನಿರ್ದೇಶಕರಾದ ಪ್ರಭಾಕರ್. ಎಚ್. ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ, ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಬಾಬು ಪೂಜಾರಿ ಹನ್ನೆರಡು ಕವಲು ಶಶಿಧರ್ ಶೆಟ್ಟಿ ಹಕ್ಕೇರಿ, ಸುರೇಶ್ ಪೂಜಾರಿ ಪಾಣಿಮೇರು, ಜೋಸೆಫ್ ಹಿಲಾರಿ ನಜರತ್ ಹನ್ನೆರಡು ಕವಲು ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪ್ರದೀಪ್ ಪಾಣಿಮೇರು ವರದಿ ವಾಚಿಸಿ, ಸಂಘದ ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಕುಂಡಾಜೆ ಸ್ವಾಗತಿಸಿದರು. ನಿರ್ದೇಶಕ ಉಮೇಶ್ ಶೆಟ್ಟಿ ಪಾಲ್ಯ ಕಾರ್ಯಕ್ರಮ ನಿರೂಪಿಸಿ, ಸಂಘದ ಸಿಬ್ಬಂದಿ ಸುರೇಶ್. ಎಚ್.ಧನ್ಯವಾದ ನೀಡಿದರು.

Related posts

ರಾಜ್ಯದ 5,8 ಮತ್ತು 9ನೇ ತರಗತಿ “ಬೋರ್ಡ್​” ಪರೀಕ್ಷೆಗೆ “ಸುಪ್ರೀಂ ಕೋರ್ಟ್” ತಡೆಯಾಜ್ಞೆ

Suddi Udaya

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಸುಲ್ಕೇರಿಮೊಗ್ರು: ಸೇನರಪಲ್ಕೆ ನಿವಾಸಿ ಅಶ್ವಿನಿ ಅಸೌಖ್ಯದಿಂದ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಸುನೀಲ್ ಕುಮಾರ್ , ಉಪಾಧ್ಯಕ್ಷರಾಗಿ ದಯಾನಂದ ಎಸ್

Suddi Udaya

ಗುರುವಾಯನಕೆರೆ ಸಹಕಾರಿ ಸಂಘದ  ವಾರ್ಷಿಕ ಮಹಾಸಭೆ

Suddi Udaya
error: Content is protected !!