23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ : ಸ್ಕೌಟಿಂಗ್ ತರಬೇತಿ ಶಿಬಿರದ ಉದ್ಘಾಟನೆ

ಮುಂಡಾಜೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧೀನಕ್ಕೊಳಪಟ್ಟ ಮುಂಡಾಜೆ ಪದವಿ ಪೂರ್ವ ಕಾಲೇಜು ಮುಂಡಾಜೆ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇಲ್ಲಿನ ಕಬ್ಸ್- ಬುಲ್ ಬುಲ್, ಸೌಟ್ಸ್- ಗೈಡ್ಸ್, ರೋವರ್ಸ್‌ ಮತ್ತು ರೇಂಜರ್ಸ್ ವಿಭಾಗಗಳ ಎರಡು ದಿನದ ತರಬೇತಿ ಶಿಬಿರದ ಉದ್ಘಾಟನೆಯು ಜರುಗಿತು.

ಶಿಬಿರದ ಉದ್ಘಾಟನೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಬೆಳ್ತಂಗಡಿ ಇದರ ಕಾರ್ಯದರ್ಶಿಗಳಾದ ಪ್ರಮೀಳಾರವರು ನೆರವೇರಿಸಿ, ಸ್ಕೌಟಿಂಗ್ ಗೈಡಿಂಗ್ ಸಮವಸ್ತ್ರ ಹಾಗೂ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ ಇದರ ಅಧ್ಯಕ್ಷ ವಿನಯಚಂದ್ರ ಇವರು ಶಿಬಿರಕ್ಕೆ ಶುಭ ಹಾರೈಸಿದರು.


ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಗೀತಾ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಮುಖ್ಯಶಿಕ್ಷಕಿ ಚಂದ್ರಮತಿ, ಹಿರಿಯ ಶಿಕ್ಷಕಿ ಶ್ರೀಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ರೇಂಜರ್ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರೇಂಜರ್ ಶ್ರಾವ್ಯ ನಿರೂಪಿಸಿ, ರೇಂಜರ್ ಮೇಟ್ ಹೊಂಗಿರಣ ಸ್ವಾಗತಿಸಿ, ರೇಂಜರ್ ಜಲಜಾಕ್ಷಿ ಧನ್ಯವಾದಗೈದರು.

Related posts

ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೆಳಕು ಕಾರ್ಯಕ್ರಮ

Suddi Udaya

ಕೊಕ್ಕಡ : ಮುಂಡೂರುಪಳಿಕೆ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ತಣ್ಣೀರುಪಂತ: ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.2.26 ಕೋಟಿ ವ್ಯವಹಾರ, ರೂ.5.47 ಲಕ್ಷ ಲಾಭ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ನ್ಯೂ ವೈಬ್ರೆಂಟ್ ಪ.ಪೂ. ಕಾಲೇಜಿನಲ್ಲಿ ಹಿರೋಷಿಮಾ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!