23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಬೆಳ್ತಂಗಡಿ

ಸೆ.22-ಅ.2: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

ಮಿತ್ತಬಾಗಿಲು: ಇತಿಹಾಸ ಪ್ರಸಿದ್ಧ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ದೇವಸ್ಥಾನದಲ್ಲಿ ಸೆ.22ರಿಂದ ಆ.2ರವರೆಗೆ ನವರಾತ್ರಿ ಪೂಜೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.


ಧಾರ್ಮಿಕ ಕಾರ್ಯಕ್ರಮಗಳು: ಸೆ.30ರಂದು ಪೂರ್ವಾಹ್ನ ಶ್ರೀದೇವಿಯ ಪ್ರೀತ್ಯರ್ಥವಾಗಿ ದೇವಳದ ವತಿಯಿಂದ ಚಂಡಿಕಾ ಹೋಮ ಜರಗಲಿರುವುದು. ಅ.1ರಂದು ರಂಗಪೂಜೆಯ ನಂತರ, ಕನ್ನಿಕಾ ಪೂಜೆ, ಬ್ರಾಹ್ಮಣ ಆರಾಧನೆ, ಸುವಾಸಿನಿ ಪೂಜೆ ಪ್ರಸಾದ ವಿತರಣೆ. ತದನಂತರ ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ಜರಗಲಿದೆ.


ಸಾಂಸ್ಕೃತಿಕ ಕಾರ್ಯಕ್ರಮ: ಸೆ.26ರಂದು ರಾತ್ರಿ ಶ್ರೀ ದುರ್ಗಾ ಮೆಲೋಡಿಸ್ ನಾವೂರು ಇದರ ಕಲಾವಿದರಿಂದ ಭಕ್ತಿ ಸಂಗೀತ ರಸಮಂಜರಿ ಹಾಗೂ ಹಾಸ್ಯಮಯ ಕಾರ್ಯಕ್ರಮ ಜರುಗಲಿರುವುದು. ಸೆ.27ರಂದು ರಾತ್ರಿ ಪ್ರೀತಿ ವಿ.ಜೆ. ಕಿಲ್ಲೂರು ಹಾಗೂ ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.


ಅ.2ರಂದು ರಾತ್ರಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ಯಕ್ಷಗಾನ ಮಂಡಳಿ ಕೊಲ್ಲಿ ಇವರಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೆÀ್ಮ ಎಂಬ ಯಕ್ಷಗಾನ ಬಯಲಾಟ ಜರುಗಲಿದೆ.

ಶ್ರೀ ಕ್ಷೇತ್ರದಲ್ಲಿ ಊರವರ, ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರದ ನೀಲ ನಕ್ಷೆ

Related posts

ಬಂದಾರು: ಪಾಣೆಕಲ್ಲು ಶಿರಾಡಿ ಗ್ರಾಮ ದೈವ ಸಪರಿವಾರ ದೈವಸ್ಥಾನ ಕಾಲಾವಧಿ ನೇಮೋತ್ಸವದ ಸಮಾಲೋಚನಾ ಸಭೆ

Suddi Udaya

ಪಬ್ಲಿಕ್ ಪರೀಕ್ಷೆ : ಉಣ್ಣಾಲು , ಕೊಯ್ಯೂರು ಸಿರಾಜುಲ್ ಹುದಾ ಅರೇಬಿಕ್ ಸ್ಕೂಲ್ ವಿದ್ಯಾರ್ಥಿ ನೂರುನ್ನಿಸಾ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ್‍ಯಾಂಕ್: ಉಣ್ಣಾಲು ಕೊಯ್ಯೂರು ಮದರಸಕ್ಕೆ ಶೇಕಡಾ 100 ಫಲಿತಾಂಶ

Suddi Udaya

ನಿರಂಜನ ಬಾವಂತಬೆಟ್ಟುರವರಿಗೆ ನುಡಿನಮನ

Suddi Udaya

ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯಾಂತ್ರಿಕ ಕಾರ್ಯಾಗಾರ

Suddi Udaya

ಮೊಗ್ರು : ಮುಗೇರಡ್ಕ ಅಲೆಕ್ಕಿ ಜೈ ಶ್ರೀ ರಾಮ ಶಿಶುಮಂದಿರ ಆಶ್ರಯದಲ್ಲಿ ನಡೆದ ರೀಲ್ಸ್ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಅ. 24: ಕೊಕ್ಕಡ ಶ್ರೀ ಮಹಾಗಣಪತಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ ನೂತನ ಕಟ್ಟಡದ ಶಿಲಾನ್ಯಾಸ

Suddi Udaya
error: Content is protected !!