ಧಾರ್ಮಿಕ

ಧರ್ಮಸ್ಥಳ 27ನೇ ವಷ೯ದ ಭಜನಾ ಕಮ್ಮಟದ ಸಮಾರೋಪ : ಭಜನೆಯಿಂದ ಧಮ೯ ಸಂಸ್ಕೃತಿಯ ಅನಾವರಣ: ಒಡಿಯೂರು ಶ್ರೀ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ವತಿಯಿಂದ 27ನೇ ವಷ೯ದ ಭಜನಾ ಕಮ್ಮಟದ ಸಮಾರೋಪ ಸಮಾರಂಭ ಸೆ.21ರಂದು‌ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರುನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಭಜನೆ ಭಗವಂತನ ಸಾಕ್ಷಾತ್ಕಾರಕ್ಕೆ ಸುಲಭ ಮಾರ್ಗವಾಗಿದ್ದು, ಭಜನೆಯಿಂದ ಧಮ೯ ಸಂಸ್ಕೃತಿಯ ಅನಾವರಣವಾಗಿರುತ್ತದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ವಹಿಸಿದ್ದರು.

ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಶ್ರೀಧಾಮ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು, ಲೋಕಸಭಾ ಕ್ಷೇತ್ರ, ಮಂಗಳೂರು, ಕೆ. ಪ್ರತಾಪಸಿಂಹ ನಾಯಕ್ ವಿಧಾನ ಪರಿಷತ್‌ ಸದಸ್ಯರು, ಮಾತೃಶ್ರೀ ಡಾ|| ಹೇಮಾವತಿ ವೀ. ಹೆಗ್ಗಡೆಯವರು ಉಪಾಧ್ಯಕ್ಷರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಡಿ. ಹರ್ಷೇಂದ್ರ ಕುಮಾ‌ರ್ ಉಪಾಧ್ಯಕ್ಷರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಭಾಗವಹಿಸಿದ್ದರು.

ವೇದಿಕೆಯಲ್ಲಿ ಡಿ.ಸುರೇಂದ್ರ ಕುಮಾರ್, ಶ್ರೀಮತಿ ಸುಪ್ರೀಯ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಮೈತ್ರಿ, ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ಹಾಗೂ ಮಹಿಳಾ ಶಿಬಿರಾರ್ಥಿಗಳಿಂದ ಭಜನೆ ಪ್ರಾತ್ಯಕ್ಷಿಕೆ ಮತ್ತು ಸಾಮೂಹಿಕ ಕುಣಿತ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಂಕರ್ ಶ್ಯಾನುಭಾಗ್, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಸೌಮ್ಯ ಸುಭಾಷ್,ಡಾ. ಐ.ಶಶಿಕಾಂತ್ ಜೈನ್, ಜಯರಾಂ ಭಟ್ ಕುಂದಾಪುರ, ಸಂದೇಶ, ನಾಗೇಶ್, ವಿನ್ಯಾಸ್, ವಿದುಷಿ ಚೈತ್ರ, ಡಾ. ಭಾಷಿಣಿ, ಡಾ.ಅನನ್ಯ ಇವರನ್ನು ಗೌರವಿಸಲಾಯಿತು. ರಾಜ್ಯ ಭಜನಾ ಪರಿಷತ್ ಪರವಾಗಿ ಖಾವಂದರಿಗೆ, ಮಾತೃಶ್ರೀ ಅಮ್ಮನವರಿಗೆ, ಭಜನಾ ಪರಿಷತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಗೌರವಿಸಿದರು.

ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆ ಬಳಿಕ ಶ್ರೀ.ಧ.ಮಂ.ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಕುಮಾರ್ ಸ್ವಾಗತಿಸಿದರು. ಶ್ರೀ.ಧ.ಮಂ.ಭಜನಾ ಕಮ್ಮಟದ ಕಾಯ೯ದಶಿ೯ ವೀರೂ ಶೆಟ್ಟಿ ವರದಿ ವಾಚಿಸಿದರು. ಶಿಬಿರಾರ್ಥಿ ಗಳಾದ ಕೃಷ್ಣ ಪೂಜಾರಿ ಕುಂದಾಪುರ, ಭವಿಷ್ಯ ನೆಲ್ಯಾಡಿ ಅನಿಸಿಕೆ ವ್ಯಕ್ತಪಡಿಸಿದರು. ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಧನ್ಯವಾದವಿತ್ತರು. ಶ್ರೀ ನಿವಾಸ ರಾವ್ ಕಾಯ೯ಕ್ರಮ ನಿರೂಪಿಸಿದರು.

Related posts

ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

Suddi Udaya

ಶಿಬಾಜೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಭಜನೋತ್ಸವ: ಶೌರ್ಯ ವಿಪತ್ತು ತಂಡದಿಂದ ಶ್ರಮದಾನ

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಹೆಗ್ಗಡೆ ಭಾಗಿ

Suddi Udaya

ನಾಳ ಕ್ಷೇತ್ರಗಳಲ್ಲಿ ರೆಂಜೆಗಿಡದ ವೃಕ್ಷಾರೋಪಣ ಕಾರ್ಯಕ್ರಮ

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಸಾನಿಧ್ಯದಲ್ಲಿ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ

Suddi Udaya

ಅಳದಂಗಡಿ ಮೆಸ್ಕಾಂ ಇಲಾಖೆಯಲ್ಲಿ ಆಯುಧ ಪೂಜೆ

Suddi Udaya
error: Content is protected !!