September 17, 2026
ಶಾಲಾ ಕಾಲೇಜು

ಬೆಳ್ತಂಗಡಿ :ಪಿ.ಎಂ.ಶ್ರೀ .ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ

.
ಬೆಳ್ತಂಗಡಿ :ತಾಲೂಕು ಕಾನೂನು ಸೇವೆಗಳ ಸಮಿತಿ ತಾಲೂಕು ವಕೀಲರುಗಳ ಸಂಘ ರಿಜಿಸ್ಟರ್ ಹಾಗೂ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇದರ ಸಂಯುಕ್ತಾಶ್ರಯದಲ್ಲಿ ಸೆ 19.ರಂದು ಪೋಕ್ಸೋ ಹಾಗೂ ವಿಶ್ವ ಪೋಷಕಾಂಶ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಶಿಬಿರದ ಉದ್ಘಾಟನೆಯನ್ನು ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಮನು ಬಿ.ಕೆ. ಅವರು ದೀಪಬೆಳಗುವ ಮೂಲಕ ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರು ಶ್ರೀಮತಿ ಚೇತನಾಕ್ಷಿ ರವರು. ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಧಾನಸಿವಿಲ್ ನ್ಯಾಯಾಧೀಶರಾದ ಗೌರವಾನ್ವೀತ ಶ್ರೀ ಸಂದೇಶ್ ಕೆ,ವಕೀಲರುಗಳ ಸಂಘದ ಕಾರ್ಯದರ್ಶಿ ಶ್ರೀ ನವೀನ್ ಬಿ.ಕೆ,ವಕೀಲರಾದ ಶ್ರೀಮತಿ ಮಮ್ತಾಜ್ ಬೇಗಂ,ಮುಖ್ಯಶಿಕ್ಷಕರಾದ ಶ್ರೀ ಸೂರ್ಯನಾರಾಯಣ ಪುತ್ತೂರಾಯ.ಪಿ. ಭಾಗವಹಿಸಿದ್ದರೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸ್ವರ್ಣಲತಾ,ಹಿರಿಯ ನ್ಯಾಯವಾದಿಗಳು ಇವರು** ಮಕ್ಕಳ ರಕ್ಷಣೆ,ಪೋಕ್ಸೋ ಹಾಗೂ ವಿಶ್ವ ಪೋಷಕಾಚರಣೆ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ತರಬೇತಿ ನೀಡಿದರು.ಸಭೆಯಲ್ಲಿ ಹಿರಿಯ ವಿಭಾಗದ ವಿದ್ಯಾರ್ಥಿಗಳು,ಮೇಲುಸ್ತುವಾರಿ ಸಮಿತಿ ಸದಸ್ಯರು,ಪೋಷಕರು,ಶಿಕ್ಷಕವೃಂದದವರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಜನನ ಪ್ರಮಾಣಪತ್ರಇಲ್ಲದೆ ದಾಖಲಾದ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಮೂಲಕ ಮಾಡಿಸಿದ ಜನನ ಪ್ರಮಾಣಪತ್ರವನ್ನು ವಿತರಿಸಲಾಯಿತು.ಹಿರಿಯ ಶಿಕ್ಷಕಶ್ರೀ ದಿನಕರ ನಾಯಕ್ ಸ್ವಾಗತಿಸಿದರೆ,ಹಿರಿಯಶಿಕ್ಷಕಿ ಶ್ರೀಮತಿ ವಿದ್ಯಾಶೆಣೈ ಧನ್ಯವಾದಸಲ್ಲಿಸಿದರು.ಶಿಕ್ಷಕಿ ಚಿತ್ರಾ ಜಿ.ಕೆ.ಇವರು ಕಾರ್ಯಕ್ರಮ ನಿರ್ವಹಿಸಿದರು.

Related posts

ಮುಡಿಪು ನವೋದಯ ಶಾಲೆಗೆ ಶಿಶಿಲ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಶಿವಾನಿ ಆರ್. ಪಿ. ಆಯ್ಕೆ

Suddi Udaya

ಕ್ರೀಡಾಕೂಟ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಪಿಯುಸಿ ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ವರ್ಷ ಅವರಿಗೆ ಶೇ 96.66 ಫಲಿತಾಂಶ

Suddi Udaya

ವಿದ್ವತ್‌ ಪದವಿ ಪೂರ್ವ ಕಾಲೇಜು: ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.97.43 ಫಲಿತಾಂಶ

Suddi Udaya
error: Content is protected !!