23.7 C
ಪುತ್ತೂರು, ಬೆಳ್ತಂಗಡಿ
April 24, 2026
ವರದಿ

ಉಜಿರೆ ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದ ಮಹಾಸಭೆ

ಉಜಿರೆ: ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಉಜಿರೆ ಇದರ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ ಇವರ ಅಧ್ಯಕ್ಷತೆಯಲ್ಲಿ ಸೆ.20ರಂದು ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಒಕ್ಕೂಟದ ಪದಾಧಿಕಾರಿ ಸುನಂದ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಆರಂಭಿಸಲಾಯಿತು. ಕಾರ್ಯಕ್ರಮವನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ ಕಾರಂತ್ ಉದ್ಘಾಟಿಸಿ ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ನ ಒಗ್ಗಟ್ಟಿನಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯವೆಂದು ಒಕ್ಕೂಟದ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಾರ್ಷಿಕ ವರದಿ ಮಂಡನೆಯನ್ನು M. B. Kಸುಜಾತ ಇವರು ಮಂಡಿಸಿದರು.L. C. R. P ಚಿತ್ರ ಇವರು ಶಾಸನಬದ್ಧ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿದರು ಸಂಜೀವಿನಿ ಚಪ್ಪಾಳೆ ಯೊಂದಿಗೆ ಸರ್ವಾನು ಮತದಿಂದ ಈ ವರದಿ ಮಂಡನೆಯನ್ನು ಅನುಮೋದಿಸಲಾಯಿತು. ರಾಷ್ಟ್ರೀಯ ಜೀವನೋಪಾಯ ಅಭಿಯಾನದ ( NRLM ) ಯೋಜನೆ ಬಗ್ಗೆ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಹರಿಪ್ರಸಾದ್ ಇವರು ಸಮಗ್ರ ಮಾಹಿತಿಯನ್ನು ನೀಡಿದರು. ತಾಲೂಕು ಯೋಜನಾ ವ್ಯವಸ್ಥಾಪಕರಾದ ಪ್ರತಿಮಾ ಸ್ವಸಹಾಯ ಸಂಘಗಳ ಕಾರ್ಯ ವೈಖರಿ ಹೇಗಿರಬೇಕು ಎಂದು ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ವಲಯ ಮೇಲ್ವಿಚಾರಕರಾದ ಜಯಾನಂದ ಇವರು ಸಂಘಗಳು ಸಾಲ ಪಡೆದು ಮರುಪಾವತಿಸುವ ಜವಾಬ್ದಾರಿಯ ಬಗ್ಗೆ ಎಲ್ಲಾ ಸದಸ್ಯರಿಗೂ ತಿಳಿಹೇಳಿದರು.

ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಇವರು ಸಂಜೀವಿನಿ ಸಂಘಗಳು ಗ್ರಾಮೀಣ ಮಹಿಳೆಯರ ಜೀವನದಲ್ಲಿ ಪ್ರಮುಖ ವಾಗಿದ್ದು, ಸಂಜೀವಿನಿ ಸದಸ್ಯರು ತಮ್ಮಲ್ಲೇ ದೊರೆಯುವ ಉತ್ಪನ್ನಗಳನ್ನು ಮೌಲ್ಯವರ್ದಿತ ಉತ್ಪನ್ನಗಳಾಗಿ ಮಾಡಿ ಮಹಿಳೆಯರು ಸ್ವತಹ ಉದ್ಯಮಿಗಳಾಗಿ ಇತರರಿಗೆ ಕೆಲಸ ನೀಡುವ ಮಟ್ಟದಲ್ಲಿ ಬೆಳೆಯಬೇಕು ಅಂತಹ ಮಹಿಳೆಯರಿಗೆ ನಮ್ಮ ಗ್ರಾಮ ಪಂಚಾಯತ್ ಎಂದಿಗೂ ಬೆಂಬಲವಾಗಿ ನಿಲ್ಲುವುದು ಎಂದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಬೀಟ್ ಪೊಲೀಸ್ ಹಾಗೂ ಲಿಂಗತ್ವ ವೇದಿಕೆಯ ಸದಸ್ಯರಾದ ಸಂತೋಷ್ ಇವರು ಗ್ರಾಮದ ಜನರಿಗೆ ಏನೇ ಸಮಸ್ಯೆ ಇದ್ದರೂ ಭಯಪಡದೆ ಪೊಲೀಸ್ ಇಲಾಖೆಯ ಜೊತೆ ಹೇಳಿದಾಗ ಇಲಾಖೆಯಿಂದ ನಾವು ಸದಾ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು. ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ ಇವರು ನಮ್ಮ ಒಕ್ಕೂಟದಿಂದ ಸೂಪರ್ ಮಾರ್ಕೆಟ್ ಮಾಡುವ ಯೋಜನೆಯ ಬಗ್ಗೆ ತಿಳಿಸಿ, ಉಜಿರೆಯಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಸಂಜೀವಿನಿ ಬ್ರಾಂಡ್ ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆ ಒದಗಿಸುವ ಯೋಜನೆಯ ವಿವರವನ್ನು ತಿಳಿಸಿದಾಗ ಸರ್ವಾನುಮತದಿಂದ ಒಕ್ಕೂಟದ ಎಲ್ಲಾ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

ಉತ್ತಮ ಕಾರ್ಯನಿರ್ವಹಿಸುವ ಸಂಜೀವಿನಿ ಸ್ವಸಹಾಯ ಸಂಘಗಳು , CIF ಸಾಲವನ್ನು ಉದ್ದೇಶಿತ ಯೋಜನೆಗೆ ಬಳಸಿ ಯಶಸ್ವಿಯಾದ ಮಹಿಳೆಯರು ಮತ್ತು ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಭಾಗವಹಿಸಿ ಪ್ರಥಮವಾಗಿ ಹಾಜರಾತಿ ಹಾಕಿದ ಮಹಿಳೆ ಮತ್ತು ಲಕ್ಕಿ ಮಹಿಳೆ ಎಂಬ ವಿಭಾಗದಡಿ ಒಕ್ಕೂಟದ ಪರವಾಗಿ ಕಿರು ಕಾಣಿಕೆಯನ್ನು ಸಂಜೀವಿನಿ ಸದಸ್ಯರಿಗೆ ನೀಡಲಾಯಿತು. ಬಹುಮಾನ ವಿತರಣೆಯನ್ನು ಪದಾಧಿಕಾರಿ ನಳಿನಿ ಯವರು ನಿರ್ವಹಿಸಿದರು. ಉತ್ತಮವಾಗಿ ಜನರ ಮಧ್ಯೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಒಕ್ಕೂಟದ ಅಧ್ಯಕ್ಷರು ವೈಯಕ್ತಿಕವಾಗಿ ಪುಟ್ಟ ಉಡುಗೊರೆಯನ್ನು ನೀಡಿ ಗೌರವಿಸಿ ದರು.

ಈ ಸಂದರ್ಭದಲ್ಲಿ ಅಕ್ಕ ಕೆಫೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಒಕ್ಕೂಟದ ಮಾಜಿ ಅಧ್ಯಕ್ಷೆ ಹಾಗೂ ಆದಿಪರಾಶಕ್ತಿ ಸಂಜೀವಿನಿ ಸಂಘದ ಅಧ್ಯಕ್ಷರಾದ ಶ್ರೀಮತಿ ಶೀಲಾವತಿ ಎಂ ಕೆ ಇವರನ್ನು ಎಲ್ಲರ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ NRLM ಕೃಷಿ ವಿಭಾಗದ ಬಂಗಾರಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಒಕ್ಕೂಟದ ಕಾರ್ಯದರ್ಶಿ ದೀಪ ನಿರ್ವಹಣೆ ಮಾಡಿದರು. ಒಕ್ಕೂಟದ ಪದಾಧಿಕಾರಿ ಚಂದ್ರಕಲಾ ಇವರು ಸ್ವಾಗತಿಸಿ ಅನಿತಾ ಬಂಗೇರ ವಂದಿಸಿದರು. ಕೃಷಿ ಸಕಿ ಭಾಗಿರತಿ ಮತ್ತು ಪಶುಸಕ್ಕಿ ಏಕಲತ ಇವರು ಸಹಕರಿಸಿದರು ಸಹಕರಿಸಿದರು.

Related posts

ಮಗನಿಂದ ತಂದೆಯ ಕೊಲೆ ಯತ್ನ ಆರೋಪಿ ಮಗನನ್ನು ಬಂಧಿಸಿದ ಪೊಲೀಸರು

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿಂದ ಮಕ್ಕಳ ರಜಾ ಶಿಬಿರ 2025: ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯೊಂದಿಗೆ ಮಾಹಿತಿ ಕಾರ್ಯಕ್ರಮ

Suddi Udaya

ಲಾಯಿಲ: “ಶರಣು ಶರಣು ಶ್ರೀ ಗುರುರಾಘವೇಂದ್ರ” ಭಕ್ತಿಗೀತೆ ಬಿಡುಗಡೆ

Suddi Udaya

ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಶ್ರೀ ಗುರುದೇವ ಪ್ರ.ದ. ಕಾಲೇಜಿನ ವಿದ್ಯಾರ್ಥಿನಿ ಹಸ್ತವಿ ಪ್ರಥಮ ಸ್ಥಾನ

Suddi Udaya

ನಾವರ: 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರಿಕ್ಷಾ ಸ್ಕೂಟಿಗೆ ಡಿಕ್ಕಿ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya
error: Content is protected !!