32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ ಶಿವಳ್ಳಿ ಸಮಾಜದ ಸಭೆ

ಬೆಳ್ತಂಗಡಿ: ನಮ್ಮ ಋಷಿ ಮುನಿಗಳು ಗೊತ್ರಗಳನ್ನು ನಿರ್ಧರಿಸಿದ್ದಾರೆ. ಇದಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಪ್ರತೀ ವ್ಯಕ್ತಿಯೂ ನಮ್ಮ ಋಷಿ ಮುನಿಗಳು ರೂಪಿಸಿದ ದಾರಿಯಲ್ಲಿ ಮುಂದುವರಿಯಬೇಕು. ಇದರಿಂದ ಜೀವನದಲ್ಲಿ ಸಂಸ್ಕಾರ ಆನಂದ ದೊರೆಯುತ್ತದೆ. ಮತ್ತು ಹಿರಿಯರ ನೆನಪುನೊಂದಿಗೆ ಕುಟುಂಬ ಪದ್ದತಿಯು ಬೆಳೆಯುತ್ತದೆ. ಪರಂಪರೆ ಸಂಸ್ಕ್ರತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಹಿರಿಯರು ನೀಡಿದ ಸಂಸ್ಕಾರವನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹಿರಿಯ ವಿದ್ವಾಂಸ ಶ್ರೀನಿಧಿ ಅಮ್ಮಣ್ನಾಯ ಕೊಕ್ಕಡ ನುಡಿದರು.


ಅಡ್ಕಾಡಿ ಶ್ರೀಕರ ರಾವ್ ಅವರ ಮನೆಯಲ್ಲಿ ನಡೆದ ವಲಯ ಶಿವಳ್ಳಿ ಸಮಾಜದ ಸಭೆಯಲ್ಲಿ ಅವರು ಉಪನ್ಯಾಸ ನೀಡಿ ಮಾರ್ಗದರ್ಶನ ನೀಡಿದ್ದರು.


ಈ ಸಂದರ್ಭದಲ್ಲಿ ಅವರಿಗೆ ಸಮಾಜದ ವತಿಯಿಂದ ಅಭಿನಂದನೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಪುರಂದರ ರಾವ್ ವಹಿಸಿದ್ದರು.
ತಾಲೂಕು ಪ್ರತಿನಿಧಿ ಅಡ್ಕಾಡಿ ಸುಧೀರ ರಾವ್ ಸ್ವಾಗತಿಸಿದ್ದರು. ಸಭೆಯಲ್ಲಿ ಮಹಿಳಾ ಸಮಿತಿಯ ಪಧಾಧಿಕಾರಿಗಳು , ವಿವಿಧ ವಿಭಾಗದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

Related posts

ಆ.2 : ವೇಣೂರು ವಿದ್ಯುತ್ ನಿಲುಗಡೆ

Suddi Udaya

ಮುಂಡಾಜೆ: ಕಾನೂನು ಅರಿವು ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಪಾಂಗಳದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಗೆ ವಿಮಾ ಕ್ಷೇತ್ರದ ಗೌರವ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರ ಪತ್ತೆಯಾಗಿ ಪೊಲೀಸರ ಮನವಿ

Suddi Udaya

ನೆರಿಯ ವಲಯದ ಭಜನಾ ಪರಿಷತ್ ಸಭೆ

Suddi Udaya
error: Content is protected !!