September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಮನಸ್ವಿನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವಾರ್ಷಿಕ ಮಹಾಸಭೆ

ಬಳಂಜ : ಮನಸ್ವಿನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬಳಂಜ ಇದರ ವಾರ್ಷಿಕ ಮಹಾಸಭೆ ಯನ್ನು ಸೆ.19ರಂದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಲತಾ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಪಂಚಾಯತ್ ಸದಸ್ಯೆ ಹಾಗೂ ಒಕ್ಕೂಟದ ಅಧ್ಯಕ್ಷರು ಮಹಾಸಭೆಯನ್ನು ಉದ್ಘಾಟಿಸಿದರು. ಪ್ರಸನ್ನ ಉದ್ಘಾಟನಾ ಮಾತುಗಳನ್ನಾಡಿದರು. ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಜೀವಿನಿ ಯ ಧ್ಯೇಯೋದ್ದೇಶ ಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ವಿಮಲಾ ಒಕ್ಕೂಟದ ವಾರ್ಷಿಕ ವರದಿ ಯನ್ನು ಮಂಡಿಸಿದರು.

ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಭಾರತಿ ಶಾಸನ ಬದ್ಧ ಲೆಕ್ಕ ಪರಿಶೋಧನೆಯ ವರದಿಯನ್ನು ಮಂಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಚ್ಚತೆ ಬಗ್ಗೆ, ಘಟಕದ ಬಗ್ಗೆ, ಮಾಹಿತಿ ಯನ್ನು ನೀಡಿದರು.ಶ್ರೀ ಕಲಾ VPRP concept seeding ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯನ್ನು ನಡೆಸಲಾಯಿತು.ನಿರ್ಗಮಿತ ಸದಸ್ಯರು ಗಳನ್ನು ಗೌರವಿಸಲಾಯಿತು. ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಹಾಗೂ BRP-PRI ಶ್ರೀ ಕಲಾ ರವರನ್ನೂ ಗೌರವಿಸಲಾಯಿತು.ನಂತರ ವಲಯ ಮೇಲ್ವಿಚಾರಕ ರು “ವ್ಯಸನ ಮುಕ್ತ ಕರ್ನಾಟಕ ‘ ದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.


“ಸ್ವಚ್ಛತಾ ಹೀ ಸೇವಾ ” ಕಾರ್ಯಕ್ರಮ ದಡಿ ಪ್ರತಿಜ್ಞಾ ವಿಧಿ ಯನ್ನು ಕೈಗೊಳ್ಳಲಾಯಿತು. ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು. ಸ್ವಚ್ಛ ವಾಹಿನಿಯ ಚಾಲಕಿ, ನವಶಕ್ತೀ ಸಂಘದ ಸದಸ್ಯೆ ಶ್ರೀಮತಿ ಭಾರತಿ ರವರ ಪ್ರಾರ್ಥಿಸಿದರು. ಒಕ್ಕೂಟದ ಸದಸ್ಯೆ ಶ್ರೀಮತಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸದಸ್ಯೆ ಶ್ರೀಮತಿ ಅಶ್ವಿನಿ ಸ್ವಾಗತಿಸಿದರು. ಬೇಬಿ ಧನ್ಯವಾದವಿತ್ತರು.

Related posts

ಆರಂಬೋಡಿ ಪ್ರಗತಿಪರ ಕೃಷಿಕ ಮುತ್ತಯ್ಯ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಬೂತ್ ಅಧ್ಯಕ್ಷರ ಮತ್ತು ಬಿ.ಎಲ್ ಎ ರವರ ತರಬೇತಿ ಕಾರ್ಯಗಾರ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ

Suddi Udaya

ಎಸ್ ಡಿ ಎಂ ಪಪೂ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂವಾದ

Suddi Udaya

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆ ರದ್ದು

Suddi Udaya

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳಿಗೆ ಸ್ವಾಗತ ಕಾರ್ಯಾಲಯ ಉದ್ಘಾಟನೆ

Suddi Udaya
error: Content is protected !!