September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳಿಗೆ ಸ್ವಾಗತ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ನಾಳೆ ನಡೆಯುವ ಶಿವರಾತ್ರಿಗೆ ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಆಗಮಿಸಲಿದ್ದು ಅವರ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಬೆಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಮಡಿಕೇರಿ, ತುಮಕೂರು ಮೊದಲಾದ ಊರುಗಳಿಂದ 26,000 ಮಂದಿ ಪಾದಯಾತ್ರಿಗಳು ಬರುವುದಾಗಿ ಪೂರ್ವಭಾವಿಯಾಗಿ ತಿಳಿಸಿದ್ದು, ಅವರಿಗೆ ಧರ್ಮಸ್ಥಳದಲ್ಲಿ ವಸತಿ ಛತ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.


ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತಕಾರ್ಯಾಲಯವನ್ನು ಮಾ.6 ರಂದು ಧರ್ಮಾಧಿಕಾರಿ  ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಅವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿದರು.
ಸ್ವಾಗತಕಾರ್ಯಾಲಯದಲ್ಲಿ ಪಾದಯಾತ್ರಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಅವರಿಗೆ ಬೇಕಾದ ಮಾಹಿತಿ, ಮಾರ್ಗದರ್ಶನ ಕೊಡಲಾಗುವುದು. ಪಾನೀಯದ ವ್ಯವಸ್ಥೆಯೂ ಇದೆ. ಅಗತ್ಯವಿದ್ದವರಿಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯವೂ ಇದೆ.


ಈಗಾಗಲೆ ಪಾದಯಾತ್ರಿಗಳು ಚಾರ್ಮಾಡಿ, ಮುಂಡಾಜೆ, ಉಜಿರೆ ತಲುಪಿದ್ದು ನಾಳೆ ಶುಕ್ರವಾರ ಧರ್ಮಸ್ಥಳ ತಲುಪುವರು. ಸಂಜೆ 6 ಗಂಟೆಗೆ ದೇವಸ್ಥಾನ ಬಳಿ ಇರುವ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಶಿವಪಂಚಾಕ್ಷರಿ” ಪಠಣವನ್ನು ದೀಪ ಬೆಳಗಿಸಿ  ಉದ್ಘಾಟಿಸುವರು. ಬಳಿಕ ಇಡಿ ರಾತ್ರಿ ಭಕ್ತಾದಿಗಳು ಭಜನೆ, ಪ್ರಾರ್ಥನೆ, ಧ್ಯಾನದಲ್ಲಿ ಉಪವಾಸ, ವೃತ-ನಿಯಮಗಳೊಂದಿಗೆ ಜಾಗರಣೆ ಮಾಡುವರು. ದೇವಸ್ಥಾನದಲ್ಲಿ ದೇವರದರ್ಶನಕ್ಕೆ ಅವಕಾಶವಿದೆ. ಶನಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಲಿದೆ.


ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯಪ್ರಸಾದ್, ಶ್ರೀಮತಿ ಭವಾನಿ ಮಾಹಿತಿ ಕಛೇರಿಯ ವ್ಯವಸ್ಥಾಪಕ ಮೋಹನ್, ವಿಜಯ ಗೌಡ ಹಾಗೂ ಸಂತೋಷ್ ಗೌಡ ಉಪಸ್ಥಿತರಿದ್ದರು. 

Related posts

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ಬೆಳ್ತಂಗಡಿ ಬಿಜೆಪಿ ಮಂಡಲದಿಂದ ಸ್ವಾಗತ

Suddi Udaya

ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗಬ್ರಹ್ಮಮಂಡಲ ಸೇವೆ ಕಾರ್ಯಕ್ರಮ , ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊಡಿಮರ ಸ್ಥಾಪನೆ

Suddi Udaya

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಭೂಮಿ ದಿನ ಮತ್ತು ಪುಸ್ತಕ ದಿನ ಆಚರಣೆ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ

Suddi Udaya

ಸೋಣಂದೂರು ಸ.ಹಿ.ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!