ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜಾತಿ ಗಣತಿ ಸಮೀಕ್ಷೆಯಲ್ಲಿ ಬಂಟ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಬಂಟ, ಪರ್ಯಾಯ ಹೆಸರು ನಾಡವ ಎಂದು ನಮೂದಿಸುವಂತೆ ಬಂಟ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಹೇಳಿಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಪ್ರಾರಂಭಿಸಿರುತ್ತದೆ. ಸಮೀಕ್ಷೆ ನಡೆಸುವವರು ತಮ್ಮ ಮನೆಗೆ ಬಂದಾಗ ಈ ಕೆಳಗಿನಂತೆ ಮಾಹಿತಿಯನ್ನು ನೀಡಬೇಕಾಗಿ ಬಂಟರ ಸಂಘದಿಂದ ತಿಳಿಸಲಾಗಿದೆ.

ಸಮೀಕ್ಷೆ ನಡೆಸುವವರ ಮೊಬೈಲ್ ಆಪ್‌ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಬೇಕು. 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A -0227)ರಂತೆ ಬಂಟ (Bunt) ಎಂದು ನಮೂದಿಸಬೇಕು. 11ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-1026)ರಂತೆ ನಾಡವ (Nadava) ಎಂದು ನಮೂದಿಸಬೇಕು.

ಬಂಟರಲ್ಲಿ ಶೆಟ್ಟಿ, ಆಳ್ವ, ಸಾಮಾನಿ, ಭಂಡಾರಿ, ಅಡಪ, ಅಡ್ಯಂತಾಯ, ಪೂಂಜ, ಚೌಟಿ ಮುಂತಾದ ಕುಲನಾಮಗಳು (Surname) ಇದ್ದು ಇವುಗಳು ಜಾತಿ ಸೂಚಕ ಪದಗಳು ಆಗಿರುವುದಿಲ್ಲ. ಆದುದರಿಂದ ಎಲ್ಲಿಯೂ ತಮ್ಮ ಕುಲನಾಮಗಳನ್ನು ಪ್ರಸ್ತಾಪಿಸದೇ ಜಾತಿ ಕಾಲಂನಲ್ಲಿ ಬಂಟ ಎಂಬುದಾಗಿಯೂ ಸಮಾನಾರ್ಥದ (ಪರ್ಯಾಯ) ಹೆಸರು ಎಂಬಲ್ಲಿ ನಾಡವ ಎಂಬುದಾಗಿಯೂ ನಮೂದಿಸತಕ್ಕದ್ದು.

ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಈ ಜಾತಿ ಸಮೀಕ್ಷೆ ಅತ್ಯಂತ ಪ್ರಾಮುಖ್ಯವಾಗಿದ್ದು ಪ್ರತಿಯೊಬ್ಬರೂ ಮೇಲೆ ತಿಳಿಸಿದಂತೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಬಂಟ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡ ತಿಳಿಸಿದ್ದದಾರೆ.

Related posts

ಪಡಂಗಡಿ : ತಿಮ್ಮಪ್ಪ ಜೆ ಪೂಜಾರಿ ನಿಧನ

Suddi Udaya

ಪಶುಪರಿವೀಕ್ಷಕ ಹಲ್ಲೆ ಆರೋಪ; ಪಟ್ರಮೆಯ ನಿವಾಸಿ ಕುಸಿದು ಬಿದ್ದು ಮೃತ್ಯು

Suddi Udaya

ಬಿ.ಜೆ.ಪಿ ಮನೆ ಮನೆ ಪ್ರಚಾರ ಕಾರ್ಯಕ್ಕೆ ಹರೀಶ್ ಪೂಂಜ ಚಾಲನೆ

Suddi Udaya

ಕುಕ್ಕೇಡಿ: ಪ್ರಭಾಕರ ಪೂಜಾರಿ ನಿಧನ

Suddi Udaya

ಬದ್ಯಾರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಬೆಳ್ತಂಗಡಿ ರೆಡ್ ಕ್ರಾಸ್ ತಂಡ ಕಳೆಂಜ ರಾಮಣ್ಣ ಗೌಡರ ಮನೆಗೆ ಭೇಟಿ

Suddi Udaya
error: Content is protected !!