24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ‍್ಯಕ್ರಮ

ಮೂಡಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿಯ ಪ್ರಯುಕ್ತ “ನವರಾತ್ರಿ – ನವಶಕ್ತಿ” ಎಂಬ ವಿಶೇಷ ಕಾರ‍್ಯಕ್ರಮವನ್ನು ಆಯೋಜಿಸಲಾಯಿತು.


“ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ, ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ ಸಾಧಿಸಲು ಶಕ್ತಿ ಇದೆ” ಎಂದರು ಜೊತೆಗೆ ಎಕ್ಸಲೆಂಟ್ ಸಂಸ್ಥೆಯ ಸ್ವಚ್ಛ ಪರಿಸರ ವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಇಂದು.ಎಂ. ಮುಖ್ಯ ಅಧಿಕಾರಿಗಳು ಮೂಡುಬಿದರೆ ಪುರಸಭೆ ಇವರು ಪ್ರಶಂಸಿಸಿದರು.

ನವರಾತ್ರಿಯ ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ.“ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ” ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಸ್ವಾಗತಿಸಿದರು.
ನಕಾರಾತ್ಮಕತೆಯನ್ನು ನವಶಕ್ತಿಗಳು ಸಕಾರಾತ್ಮಕತೆಯನ್ನಾಗಿ ಪರಿವರ್ತಿಸಲಿ ಎಂದು ನವಶಕ್ತಿಯ ಮಹತ್ವವನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವರಾಜ್ ಜೈನ್ ನವರು ತಿಳಿಸಿದರು.


ಶಾರದಾದೇವಿಗೆ ಪುಷ್ಪ ಅರ್ಪಿಸಿ, ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸುಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ರವರ ಮಾತೃಶ್ರೀ ಶ್ರೀಮತಿ ಪದ್ಮಾವತಿ ಅಮ್ಮನವರನ್ನು ವಿಶೇಷವಾಗಿ ಗೌರವ ಪೂರ್ವಕವಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ನವಶಕ್ತಿ ಸ್ವರೂಪದ ನವನಾರಿಯರಾದ ಶ್ರೀಮತಿ ಅಮರಾಜಿ, ಶ್ರೀಮತಿ ಸುಮಿತ್ರಾ, ಶ್ರೀಮತಿ ಚಂದನಾ, ಶ್ರೀಮತಿ ದೀಪಾ ಉಮೇಶ್ ರಾವ್, ಶ್ರೀಮತಿ ಅನಿತಾ ಸಿಕ್ವೇರಾ, ಶ್ರೀಮತಿ ಸೌಮ್ಯ ಕುಲದೀಪ್, ಶ್ರೀಮತಿ ದಿವ್ಯಾ ಪಡಿವಾಳ್, ಶ್ರೀಮತಿ ರೇಷ್ಮಾ ವರ್ಮಾ ಹಾಗೂ ಶ್ರೀಮತಿ ಪ್ರಿಯಾ ಕ್ವಿನಿ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು.


ಸನ್ಮಾನಿತಗೊಂಡ ಶೀಮತಿ ದೀಪಾ ಉಮೇಶ್ ರಾವ್ ಹಾಗೂ ಶ್ರೀಮತಿ ಪ್ರಿಯಾ ಕ್ವಿನಿ ರೋಡ್ರಿಗಸ್ ಇಂದಿನ ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.
ಎಕ್ಸಲೆಂಟ್ ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್, ಶ್ರೀಮತಿ ಅಪೇಕ್ಷರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಶಿಕ್ಷಕಿಯಾದ ಶ್ರೀಮತಿ ಅರ್ಚನಾ ಹಾಗೂ ಕುಮಾರಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಪ್ರಸಾದ್ ವಂದಿಸಿದರು.

Related posts

ಕೆಲ್ಲಗುತ್ತು ಶ್ರೀ ಸತ್ಯಸಾರಮುಪ್ಪಣ್ಯ ಮತ್ತು ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ

Suddi Udaya

ಬೆಳ್ತಂಗಡಿ : ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ “ನಂದಗೋಕುಲ” ಸ್ವ-ಸಹಾಯ ಸಂಘದ ರಚನೆ

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಬೆಳ್ತಂಗಡಿಯ ರಾಮ ಕ್ಷತ್ರಿಯ ಸಂಘದಿಂದ ರಾಮೋತ್ಸವ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಕುಟುಂಬೋತ್ಸವ ಕಾರ್ಯಕ್ರಮ

Suddi Udaya

ಮಾ.1: ಕನ್ಯಾಡಿ ನೇರೋಳ್‌ಪಲ್ಕೆ ಕೇಸರಿ ಗೆಳೆಯರ ಬಳಗದಿಂದ 12 ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Suddi Udaya

ಧರ್ಮಸ್ಥಳ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನಿಂದ ರಸ್ತೆ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!