September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಜಾಗ ಮಾರಾಟದ ಅಗ್ರಿಮೆಂಟ್ ಮಾಡಿ ರೂ.45ಲಕ್ಷ ವಂಚನೆ; ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲು

ಬೆಳ್ತಂಗಡಿ : ನಿವೇಶನ ಮಾರಾಟದ ಬಗ್ಗೆ ಅಗ್ರಿಮೆಂಟ್ ಮಾಡಿ ರೂ 45 ಲಕ್ಷ ಹಣ ಪಡೆದುಕೊಂಡು ವಂಚಿಸಿರುವ ಬಗ್ಗೆ ಬೆಳ್ತಂಗಡಿ ನಿವಾಸಿ ಪ್ರವೀಣ್ ಭಂಡಾರಿ ಹಾಗೂ ಕಲ್ಮಂಜ ನಿವಾಸಿ ಶಾಂತ ಅವರ ವಿರುದ್ದ ಬೆಳ್ತಂಗಡಿ ನಿವಾಸಿ ವಿಶ್ವನಾಥ ರೈ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ವಿಶ್ವನಾಥ್ ರೈ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಲ್ಲಿ ಆರೋಪಿ ಪ್ರವೀಣ್ ಭಂಡಾರಿ ಎಂಬಾತನು ಎರಡನೆ ಶಾಂತಾ ಎಂಬವರಿಂದ ಒಟ್ಟು 40 ಸೆನ್ಸ್ ಜಾಗವನ್ನು ಖರೀದಿ ಮಾಡಿ ಬಳಿಕ ಅದನ್ನು ವಿಶ್ವನಾಥ ರೈ ಅವರಿಗೆ ಮಾರಾಟ ಮಾಡುವುದಾಗಿ ಹೇಳಿ ರೂ 45 ಲಕ್ಷ ಹಣವನ್ನು ಪಡೆದುಕೊಂಡು ಮೂರು ತಿಂಗಳ ಒಳಗೆ ದಾಖಲೆಗಳನ್ನು ಸರಿಪಡಿಸಿ ಬರೆದು ಕೊಡುವುದಾಗಿ 9/1/24 ರಂದು ನೊಂದಾಯಿತ ಕರಾರುಪತ್ರ ಮಾಡಿಕೊಂಡಿದ್ದಾರೆ.

ಇದಾದ ಬಳಿಕ ಜಾಗವನ್ನು ಕ್ರಯಸಾಧನ ಮಾಡಿಕೊಡದೆ ಪಡೆದ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ ಅಲ್ಲದೆ ಎರಡನೆ ಆಪಾದಿತರಲ್ಲಿ ಈ ಹಿಂದೆ ಮಾಡಿಕೊಂಡಿದ್ದ ಮಾರಾಟ ಕ್ರಯ ಸಾಧನವನ್ನು ರದ್ದು ಪಡಿಸಿದ್ದಾರೆ. ಈ ಮೂಲಕ ಪಡೆದ ಹಣವನ್ನು ಹಿಂತಿರುಗಿಸದೆ ಜಾಗವನ್ನೂ ನೀಡಿದೆ ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ಭಂಡಾರಿ ಮತ್ತು ಶಾಂತ ವಿರುದ್ಧ ಸೆ. 20ರಂದು ಬಿಎನ್.ಎಸ್.u/s 316(2),318(4)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕನ್ನಡ ಭಾಷಣ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಅ. ಪ್ರೌ. ಶಾಲೆ ಶಾಲೆಯ ವಿದ್ಯಾರ್ಥಿನಿ ಕು| ಪ್ರಜ್ಞಾ ದ್ವಿತೀಯ ಸ್ಥಾನ

Suddi Udaya

ಶ್ರೀ ಧ.ಮಂ.ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪುಟ್ ಬಾಲ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ಕ್ರಿಕೆಟ್ ಪಂದ್ಯ: ಪಂದ್ಯಕ್ಕೆ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿಯವರ ಶಶಿ ಕ್ಯಾಟರಿಂಗ್ ಸರ್ವಿಸಸ್ ಫುಡ್ ಪಾರ್ಟ್ನರ್

Suddi Udaya

ಅ.5: ಓಡೀಲು ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗದಿಂದ ಓಡಿಲ್ದ ಕಂಡೊಡು ಕೆಸರ್‌ದ ಗೊಬ್ಬು

Suddi Udaya

ಪಂಚಾಯಿತಿ ಪಂಪ್ ಶೆಡ್ ಗೆ ಕಿಡಿಗೇಡಿಗಳಿಂದ ಹಾನಿ

Suddi Udaya

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!