ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಂಚಾಯಿತಿ ಪಂಪ್ ಶೆಡ್ ಗೆ ಕಿಡಿಗೇಡಿಗಳಿಂದ ಹಾನಿ

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ವ್ಯವಸ್ಥೆಯ ಪಂಪ್ ಶೆಡ್ ಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ ಘಟನೆ ನ.21ರಂದು ನಡೆದಿದೆ.

ಸೀಟು-ಕೊಡಂಗೆ- ಕಾಯರ್ತೋಡಿ ರಸ್ತೆಯ ಸೀಟು ಚಡಾವಿನ ಕೆಳಭಾಗದಲ್ಲಿ ಪಂಚಾಯಿತಿಯ ನಲ್ಲಿ ನೀರಿನ ಬೋರ್ ವೆಲ್, ಪಂಪ್ ಶೆಡ್ ಇದೆ ಇಲ್ಲಿಂದ ನೀರನ್ನು ಕೊಟ್ರೊಟ್ಟು ಎಂಬಲ್ಲಿರುವ ಟ್ಯಾಂಕಿಗೆ ಕೊಂಡೊಯ್ದು, ಗ್ರಾಮದ 200 ಕ್ಕಿಂತ ಅಧಿಕ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.

ಇಲ್ಲಿರುವ ಪಂಪ್ ಶೆಡ್ ಬಾಗಿಲಿಗೆ ಬೀಗ ಹಾಕಲಾಗುತ್ತದೆ. ಕಿಡಿಗೇಡಿಗಳು ಶೆಡ್ ನ ಹಲವು ಭಾಗಗಳಿಗೆ ಕಲ್ಲು ಅಥವಾ ಇತರ ಆಯುಧದಿಂದ ಬಡಿದಿದ್ದು ಹಾನಿ ಉಂಟುಮಾಡಿ ಮಾಡಿರುವುದು ಕಂಡು ಬಂದಿದೆ.
ಪಂಪ್ ಶೆಡ್ ಸಮೀಪವೆ ವಿದ್ಯುತ್ ಪರಿವರ್ತಕ, ಶೆಡ್ ಒಳಗೆ ಮೀಟರ್, ಮೈನ್ ಸ್ವಿಚ್, ಸ್ಟಾರ್ಟರ್ ಸಹಿತ ಅನೇಕ ವಿದ್ಯುತ್ ಉಪಕರಣಗಳಿವೆ. ಇಂತಹ ಅಪಾಯಕಾರಿ ಸ್ಥಳದಲ್ಲಿ ಕಿಡಿಗೇಡಿಗಳು ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ಮೂಡಿದೆ.

Related posts

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ಅವಮಾನ, ಸಂವಿಧಾನದ ಮೇಲಿನ ದಾಳಿ: ಸಂತೋಷ್ ಕುಮಾರ್ ಲಾಯಿಲ ಖಂಡನೆ

Suddi Udaya

ಕಬಡ್ಡಿ ಪಂದ್ಯಾಟ: ತೋಟತ್ತಾಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪೃಥ್ವಿನಿ ಶೆಟ್ಟಿಗೆ ಆಲ್ ರೌಂಡರ್ ಪ್ರಶಸ್ತಿ

Suddi Udaya

ಕಲ್ಮಂಜ: ಪುಟಾಣಿ ಮಕ್ಕಳ ನೂತನ ‘ಸದಾಶಿವೇಶ್ವರ’ ಭಜನಾ ತಂಡ ರಚನೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಮಾಜಿ‌ ಸಚಿವ ಗಂಗಾಧರ ಗೌಡರವರಿಂದ ಹಕ್ಕು ಚಲಾವಣೆ

Suddi Udaya
error: Content is protected !!