32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ, ಭಜನಾ ಸಂಕೀರ್ತನೆ ಉದ್ಘಾಟನೆ

ಬೆಳ್ತಂಗಡಿ: ಆದಿ ದೈವ ಧೂಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಜನಾ ಸಂಕೀರ್ತನೆ ಮತ್ತು ನವರಾತ್ರಿ ಉತ್ಸವ ವಿಜೃಂಭಣೆಯಿಂದ ಉಪ್ಪಿನಂಗಡಿಯ ಉದ್ಯಮಿ ಎಮ್ ವರದರಾಜ್ ರವರ ದಿವ್ಯ ಹಸ್ತದಲ್ಲಿ ದೀಪ ಬೆಳಗಿಸುವ ಮುಖಾಂತರ ಪ್ರಾರಂಭಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಜಯಂತ ನಡುಬೈಲು, ಶ್ರೀಧರ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಮೋಹನ್ ದಾಸ್ ಬಂಗೇರ, ಉಲ್ಲಾಸ್ ಕೋಟ್ಯಾನ್, ಶ್ರೀಮತಿ ಹೇಮಲತಾ ರಘು ಸಾಲಿಯಾನ್, ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಕುರಿಕಾರ, ಆರ್ ಸಿ ನಾರಾಯಣ, ಆದಿಶಕ್ತಿ ಭಜನಾ ಮಂಡಳಿ ಪಟ್ಟೆಯ ಶ್ರೀಮತಿ ರೇಖ ನಾಗರಾಜ್, ಶ್ರೀಮತಿ ಶಾಲಿನಿ ರವಿ ಪೂಜಾರಿ, ಶ್ರೀ ಜನಾರ್ದನ ಪೂಜಾರಿ ನೂಜಾ, ಮುಂತಾದ ಗಣ್ಯರು ಹಾಜರಿದ್ದರು.

9 ದಿನಗಳ ಕಾಲ ನಿರಂತರ ನಡೆಯುವ ನವರಾತ್ರಿ ಉತ್ಸವದಲ್ಲಿ ಸರ್ವ ಶಕ್ತಿಗಳಿಗೆ ವಿಶೇಷ ಅಲಂಕಾರ, ಅವಳಿ ಮಕ್ಕಳಿಗೆ ಅಕ್ಷರಾಭ್ಯಾಸ, ಅನ್ನಪ್ರಸಾದ ಸೇವೆ, ವಾಹನ ಪೂಜೆ, ಮುಂತಾದ ವಿಶೇಷ ಕಾರ್ಯಕ್ರಮಗಳು ಜರಗಲಿರುವುದು ಎಂದು ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಕೆಬಿ ರಾಜಾರಾಮ್ ಸ್ವಾಗತಿಸಿ ವಂದಿಸಿದರು.

Related posts

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ಆಟಿ ಕೂಟ

Suddi Udaya

ಉಜಿರೆ ಕಕ್ಕರೆಬೆಟ್ಟು ಮನೆ ಕೆಡವಿ, ಸೊತ್ತುಗಳನ್ನು ಹೊರಗೆ ಎಸೆದ ಪ್ರಕರಣ: ಆರೋಪಿ ವಿರುದ್ಧ ಕೇಸು ದಾಖಲು

Suddi Udaya

ಬೆಳ್ತಂಗಡಿ: ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜನಾ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಗೌಡ ಆಯ್ಕೆ

Suddi Udaya

ಇಂದಿನಿಂದ ದ.ಕ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರಗಳ ಸ್ವೀಕಾರ ಆರಂಭ: ಜಿಲ್ಲಾಧಿಕಾರಿ

Suddi Udaya

ಪೆರೋಡಿತ್ತಾಯಕಟ್ಟೆ ದ.ಕ.ಜಿ.ಪ.ಉ.ಪ್ರಾ. ಶಾಲೆಯಲ್ಲಿ ಮಕ್ಕಳ ಪೋಷಕರಿಗೆ ವಿಶೇಷ ತರಬೇತಿ ಶಿಬಿರ

Suddi Udaya
error: Content is protected !!