September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿ

ನಾಲ್ಕೂರು: ಅಸೌಖ್ಯದಿಂದ ಯೈಕುರಿ ವಸಂತಿ ನಿಧನ

ಬಳಂಜ: ನಾಲ್ಕೂರು ಗ್ರಾಮದ ಯೈಕುರಿ ಮನೆತನದ ದಿ.ರಮಾನಂದ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ವಸಂತಿ (61ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಸೆ.24) ಮಧ್ಯಾಹ್ನ ಉಜಿರೆಯ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ಏರಪೇರಾಗಿದ್ದು ಕೂಡಲೇ ಅವರನ್ನು ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉಜಿರೆಯ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

ಮೃತರು ಪುತ್ರರಾದ ಬಳಂಜ ಸಂಘದ ಮಾಜಿ ಕಾರ್ಯದರ್ಶಿ ಯೋಗೀಶ್ ಆರ್, ಪ್ರಸ್ತುತ ನಿರ್ದೇಶಕ ವಿಜಯ ಪೂಜಾರಿ ಯೈಕುರಿ, ಪುತ್ರಿ ಸುಜಯ ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ಅಣ್ಣಾಮಲೈ ವಿವಿಯಿಂದ ಡಾಕ್ಟರೇಟ್‌ ಪದವಿ

Suddi Udaya

ಬರೆಂಗಾಯ: 29ನೇ ವರ್ಷದ ಮೊಸರು ಕುಡಿಕೆ ಉತ್ಸವ: ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ತಾಲೂಕಿನ ಹಲವು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಆಗಿ ಉನ್ನತೀಕರಿಸುವಂತೆ ಶಾಸಕ ಹರೀಶ್ ಪೂಂಜರಿಂದ ಮನವಿ

Suddi Udaya

ಕೊಕ್ಕಡ: ಸರ್ವಿಸ್ ಸ್ಟೇಷನ್ ಮಾಲಕ ಶಾಂತಪ್ಪ ಗೌಡ ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಪ್ರಾರಂಭ

Suddi Udaya
error: Content is protected !!