ಬೆಳ್ತಂಗಡಿ: ಮಂಗಳೂರಿನಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಿ.ಧರ್ಮಯ್ಯ(೭೧) ಅವರು ಮಂಗಳೂರು ಬೆಂದೂರುವೆಲ್‌ನ ತಮ್ಮ ಮನೆಯಲ್ಲಿ ಸೆ.೨೪ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೂಲತಃ ಹಾಸನ ಸಕಲೇಶಪುರ ಹೊಸೂರಿನವರಾಗಿದ್ದಅವರು ಮೈಸೂರಿನಲ್ಲಿ ಎಸ್ ಐ ಆಗಿ ಸೇವೆ ಪ್ರಾರಂಭಿಸಿ, ಬಳಿಕ ಯಳಂದೂರು, ಚಾಮರಾಜನಗರ, ವಿರಾಜಪೇಟೆ, ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಬೆಳ್ತಂಗಡಿ, ಕಾರ್ಕಳ, ಉಡುಪಿ, ಬಳಿಕ ಡಿವೈಎಸ್‌ಪಿಯಾಗಿ ಕಾರ್ಯನಿರ್ವಹಿಸಿದರು. ನಂತರ ಬೆಂಗಳೂರಿನಲ್ಲಿ ಎಸಿಪಿಯಾಗಿ ಮತ್ತೆ ಮಂಗಳೂರಿನಲ್ಲಿ ಡಿಸಿಪಿ(ಅಪರಾಧ-ಸಂಚಾರ) ವಿಭಾಗದಲ್ಲಿ ಸೇವೆ ಸಲ್ಲಿಸಿ, ೨೦೧೩ರಲ್ಲಿ ಸೇವಾ ನಿವೃತ್ತರಾಗಿದ್ದರು. ನಿವೃತ್ತರಾಗಿ ಮಂಗಳೂರಿನಲ್ಲೇ ನೆಲೆಸಿದ್ದರು.ಅವರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ನಾಲ್ಕು ಮೊಮ್ಮಕ್ಕಳನ್ನು ಅಗಲಿದ್ದಾರೆ.











