ಉಜಿರೆ: ಬಿರುವೆರ್ ಕುಡ್ಲ ಇದರ ಸ್ಥಾಪಕದ್ಯಕ್ಷರಾದ ಉದಯ ಪೂಜಾರಿಯವರು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಗೆ ಸೆ 24 ರಂದು ಭೇಟಿ ನೀಡಿದರು.
ಈ ವೇಳೆ ಸಂಸ್ಥೆಯ ಮಾಲಕರಾದ ಮೋಹನ್ ಕುಮಾರ್ ರವರು ಉದಯ ಪೂಜಾರಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸಂಸ್ಥೆಯ ವತಿಯಿಂದ ಗೌರವಿಸಿದರು.
ಬಳಿಕ ಮಾತನಾಡಿದ ಉದಯ ಪೂಜಾರಿಯವರು ಮೋಹನ್ ಕುಮಾರ್ ಮಾಡುತ್ತಿರುವ ಸೇವಾ ಕಾರ್ಯಗಳು, ಸರಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಗಳು, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಮಾದರಿ ಸೇವೆಗಳನ್ನು ಶ್ಲಾಘಿಸಿದರು. ಮುಂದಿನ ಸೇವಾ ಕಾರ್ಯಕ್ರಮಗಳಲ್ಲಿ ನಮ್ಮ ಬಿರುವೆರ್ ಕುಡ್ಲ ತಂಡ ಕೂಡ ನಿಮ್ಮ ಜೊತೆ ಕೈಜೋಡಿಸಲಿದ್ದೇವೆ ಎಂದರು.











