32.9 C
ಪುತ್ತೂರು, ಬೆಳ್ತಂಗಡಿ
March 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಾಲೂಕು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ: ನೂತನ ಅಧ್ಯಕ್ಷರಾಗಿ ಭಗೀರಥ ಜಿ. ಆಯ್ಕೆ

ಬೆಳ್ತಂಗಡಿ ತಾಲೂಕಿನ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಮತ್ತು ವಿವಿಧೋದ್ಧೇಶ ಸಹಕಾರ ಸಂಘಗಳ ಒಟ್ಟುಗೂಡುವಿಕೆಯಲ್ಲಿ ಭವಿಷ್ಯದಲ್ಲಿ ಭದ್ರ ಸಹಕಾರ ಸಂಘದ ಬೆಳವಣಿಗೆÀಗೆÀ ಪೂರಕವಾದ ನಿಯಮಗಳನ್ನು ಜಾರಿಗೊಳಿಸಬೇಕೆನ್ನುವ ಸದುದ್ದೇಶವನ್ನು ಇಟ್ಟುಕೊಂಡು ಪ್ರಾರಂಭಗೊAಡಿರುವ ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಇತ್ತೀಚಿಗೆ ಸಹಕಾರ ಸಂಘಗಳ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿಯಿಂದ ಉಂಟಾಗುವ ಪರಿಣಾಮಗಳ ಕುರಿತಾದ ಸಭೆಯು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸೆ.೨೩ ರಂದು ನಡೆಯಿತು. ಹಿತರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ ಇವರನ್ನು ಆಯ್ಕೆ ಮಾಡಲಾಯಿತು.


ಅಧ್ಯಕ್ಷ ಭಗೀರಥ ಜಿ ಮಾತನಾಡಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮಕ್ಕೆ ಮಾಡಿರುವ ಕೆಲವೊಂದು ತಿದ್ದುಪಡಿಗಳಿಂದ ಸಹಕಾರ ಸಂಘಗಳ ಮುಂದಿನ ಬೆಳವಣಿಗೆ ಅತ್ಯಂತ ಕಷ್ಟಕರವಾಗಿದ್ದು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಹಿತರಕ್ಷಣಾ ವೇದಿಕೆಯ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಹಿತರಕ್ಷಣಾ ವೇದಿಕೆಯ ಸದಸ್ಯ ಸಂಘಗಳಿಗೆ ಸದಸ್ಯತ್ವ ಶುಲ್ಕ ನಿಗದಿಪಡಿಸಿ ಬಾಕಿ ಉಳಿದಿರುವ ಸಹಕಾರ ಸಂಘಗಳನ್ನು ಸದಸ್ಯರನ್ನಾಗಿ ಮಾಡುವುದಾಗಿ ನಿರ್ಣಯಿಸಲಾಯಿತು. ಸದಸ್ಯ ಸಹಕಾರ ಸಂಘಗಳಿಗೆ ಸಮಸ್ಯೆಗಳು ಉಂಟಾದಾಗ ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಹಿತರಕ್ಷಣಾ ವೇದಿಕೆಯ ಉಪಾಧ್ಯಾಕ್ಷ ಡಾ.ಜಯಕೀರ್ತಿ ಜೈನ್, ಕಾರ್ಯದರ್ಶಿ ಅಶ್ವಥ್ ಕುಮಾರ್, ಜೊತೆ ಕಾರ್ಯದರ್ಶಿ ಸುಜಯ್ ಶೆಟ್ಟಿ, ಹಿತರಕ್ಷಣಾ ವೇದಿಕೆಯ ಸದಸ್ಯ ಸಂಘಗಳ ಅಧ್ಯಕ್ಷರುಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಮಾ.10: ಅಂತರಾಷ್ಟ್ರೀಯ ಬಿಲ್ಲವರ ಮಹಾ ಸಮಾವೇಶ: ಕಳಿಯ ಗ್ರಾಮದ ಬಿಲ್ಲವರ ಪೂರ್ವಭಾವಿ ಸಭೆ

Suddi Udaya

ಆರಂಬೋಡಿ: ಪಾಣಿಮೇರುನಲ್ಲಿ ಅಕ್ರಮ ಮರಳು ಸಾಗಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನಡ ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಮಹಾಸಭೆ

Suddi Udaya

ಪ್ರತಿಯೊರ್ವರ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡುವ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ’ ಸಂಸ್ಥೆಗೆ 35 ಸಂಭ್ರಮ

Suddi Udaya

ಮಚ್ಚಿನ ಬೂತ್ ಸಂಖ್ಯೆ 181, 182, 183ರ ಮತಗಟ್ಟೆಗೆ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ

Suddi Udaya
error: Content is protected !!