September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ: ಶಾಂತಿವನದಲ್ಲಿ ನವೀಕರಣಗೊಂಡ ಮಹಿಳಾ ಚಿಕಿತ್ಸಾ ವಿಭಾಗ “ಸಿಂದೂರ”ಲೋಕಾರ್ಪಣೆ

ಧರ್ಮಸ್ಥಳ:ಶಾಂತಿವನದಲ್ಲಿ ನವೀಕರಣಗೊಂಡ ಸಿಂದೂರ ಮಹಿಳಾ ಚಿಕಿತ್ಸಾ ವಿಭಾಗವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಶ್ರದ್ದಾ ಅಮಿತ್ ಅವರು ಸೆ. 25 ರಂದು ಲೋಕಾರ್ಪಣೆಗೊಳಿಸಿ ಭಾರತೀಯ ಸಂಸ್ಕೃತಿಯಲ್ಲಿ ಸಿಂದೂರಕ್ಕೆ ಮಹತ್ವ ಇದೆ. ನವೀಕರಣಗೊಂಡ ಮಹಿಳೆಯರ ಚಿಕಿತ್ಸಾ ವಿಭಾಗಕ್ಕೆ ಸಿಂದೂರ ಹೆಸರಿಟ್ಟರುವಂತದ್ದು ಸಂತೋಷ ತಂದಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಾಂತಿವನ ಎಂಬುದು ಶಾಂತಿ ಮತ್ತು ನಿರ್ಮಲತೆಯ ತಾಣವಾಗಿದ್ದು ಉತ್ತಮ ಚಿಕಿತ್ಸೆ ಸಿಗುತ್ತಿದೆ ಎಂದರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್,ಉಜಿರೆ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಶಾಂತ್ ಶೆಟ್ಟಿ,ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಡಿತ್ತಾಯ, ಮುಖ್ಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಶೆಟ್ಟಿ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಶಾಂತಿವನದ ಆಡಳಿತಾಧಿಕಾರಿ ಜಗನ್ನಾಥ್ ಯು ಉಪಸ್ಥಿತರಿದ್ದರು.

ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಡಿತ್ತಾಯ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು. ಭಾಷಿಣಿ ಮತ್ತು ಸಂಗಡಿಗರು ಪ್ರಾರ್ಥನೆಗೈದರು. ಡಾ.ಧನ್ಯಶ್ರಿ ನಿರೂಪಿಸಿದರು.

Related posts

ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ದೀಪಾವಳಿ ಹಬ್ಬ ಆಚರಣೆ

Suddi Udaya

ಮಾ.9: ಧರ್ಮಸ್ಥಳದ ಪಶು ಆಸ್ಪತ್ರೆಯ ನೂತನ ಕಟ್ಟಡ ಲೋಕಾರ್ಪಣೆ

Suddi Udaya

ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ನಾರಾವಿ ವಲಯದ ಸಾವ್ಯಾ -ಕೊಕ್ರಾಡಿ ಕಾರ್ಯಕ್ಷೇತ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

Suddi Udaya

ಕಳೆಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಅಂಬರೀಶ್ ಅಧಿಕಾರ ಸ್ವೀಕಾರ

Suddi Udaya

ಲಾಯಿಲ: ಕುಂಟಿನಿ ಮುಹಿಯ್ಯುದ್ಧೀನ್ ಅರಬಿಕ್ ಮದರಸ ನೂತನ ಕಟ್ಟಡ ಉದ್ಘಾಟನೆ

Suddi Udaya
error: Content is protected !!