September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯಲ್ಲಿ ಅರಿಹಂತ್ ಜೈನ್ ಮಾಲೀಕತ್ವದ ಅಯಾನ್ಶ್ ಮೊಬೈಲ್ ಮಳಿಗೆ ನವೀಕರಣಗೊಂಡು ಶುಭಾರಂಭ

ಬೆಳ್ತಂಗಡಿ :ಕಳೆದ 15 ವರ್ಷಗಳಿಂದ ಗ್ರಾಹಕರ ಪ್ರೀತಿ ನಂಬಿಕೆ ಗಳಿಸಿ, ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ನಲ್ಲಿ ಗುಣಮಟ್ಟದ ಸೇವೆ ನೀಡಿ, ಸತತ ಆರು ವರ್ಷಗಳಿಂದ ಅಯಾನ್ಶ್ ಮೊಬೈಲ್ ಮಳಿಗೆಯನ್ನು ಪ್ರಾರಂಭಿಸಿ, ಹೊಸತನದೊಂದಿಗೆ ನವೀಕರಣಗೊಂಡ ನೂತನ ಮಳಿಗೆ ಉದ್ಘಾಟನೆಯು ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಲಕ್ಷ್ಮೀನಾರಾಯಣ ಕಾಂಪ್ಲೆಕ್ಸ್ ನಲ್ಲಿ ಸೆ. 25 ರಂದು ನಡೆಯಿತು.

ನವೀಕರಣಗೊಂಡ ನೂತನ ಸಂಸ್ಥೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಭಗವಂತನ ಅನುಗ್ರಹದಿಂದ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದರು.

ಈ ಸಂದರ್ಭದಲ್ಲಿ ಅರಿಹಂತ್ ಅವರ ಮಾತಾ- ಪಿತರಾದ ದರ್ಶನ್ ಮತ್ತು ವಿಮಲ, ಶ್ರೀ ಕ್ಷೇತ್ರ ಧರ್ಮಸ್ಥಳ‌ದ ಧರ್ಮಾಧಿಕಾರಿಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಅಳದಂಗಡಿ ರಾಜಶೇಖರ ಶೆಟ್ಟಿ, ಕಟ್ಟಡ ಮಾಲಕರಾದ ವಿಶ್ವನಾಥ ಶೆಟ್ಟಿ, ಹರ್ಷೇಂದ್ರ ಜೈನ್, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್, ಪವರ್ ಆನ್ ಬ್ಯಾಟರಿ ಮಾಲಕ ಶೀತಲ್ ಜೈನ್,ಪ್ರಮುಖರಾದ ಶಶಿಧರ ಎ, ಪ್ರದೀಪ್ ಜೈನ್ ಶಿರ್ಲಾಲು,ಅಕ್ಷಯ್ ಜೈನ್ ಅಳದಂಗಡಿ,ಜೆಸಿ ನಾರಾಯಣ ಶೆಟ್ಟಿ ಹಾಗೂ ಅರಿಹಂತ್ ಅವರ ಮನೆಯವರು,ಬಂಧು- ಮಿತ್ರರು ಉಪಸ್ಥಿತರಿದ್ದರು.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಅರಿಹಂತ್ ಜೈನ್ ಸ್ವಾಗತಿಸಿ, ಸತ್ಕರಿಸಿದರು.

Related posts

ಹೊಸಂಗಡಿ : ಪ್ರಗತಿಪರ ಕೃಷಿಕ ರಾಮಪ್ಪ ಪೂಜಾರಿ ನಿಧನ

Suddi Udaya

ಉಪ್ಪಿನಂಗಡಿ-ಕದಿಕಾರು ಶ್ರೀ ಚಂದ್ರನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಮಹೋತ್ಸವ

Suddi Udaya

ಉಜಿರೆ:ಕಾಲಭೈರವ ಆರ್ಕೇಡ್ ನಲ್ಲಿ ಸಮೃದ್ದಿ ಟ್ರೇಡರ್ಸ್ ದಿನಸಿ ಮಳಿಗೆ ಶುಭಾರಂಭ

Suddi Udaya

ಬಂಗೇರರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸೋಣ……

Suddi Udaya

ನಾಳದಲ್ಲಿ ಅಯ್ಯಪ್ಪ ಪೂಜೆ- ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ಮಚ್ಚಿನ ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮ ಸಭೆ

Suddi Udaya
error: Content is protected !!